ADVERTISEMENT

ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ: ಯುಪಿಎಸ್‌ಸಿ

ಪಿಟಿಐ
Published 29 ಮಾರ್ಚ್ 2024, 15:31 IST
Last Updated 29 ಮಾರ್ಚ್ 2024, 15:31 IST
   

ನವದೆಹಲಿ: ಮಣಿಪುರದ ಗುಡ್ಡಗಾಡು ಜಿಲ್ಲೆಗಳ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವಾಗಿ ಇಂಫಾಲ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ ಪರೀಕ್ಷಾ ಕೇಂದ್ರವನ್ನು ಬದಲಾಯಿಸಿಕೊಳ್ಳಲು ಅವರಿಗೆ ಅವಕಾಶ ನೀಡಲಾಗುವುದು ಮತ್ತು ಅವರ ಪ್ರಯಾಣಕ್ಕೆ ರಾಜ್ಯ ಸರ್ಕಾರವು ಸೌಲಭ್ಯ ಕಲ್ಪಿಸಲಿದೆ ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ತಿಳಿಸಿತು. 

ಅಭ್ಯರ್ಥಿಗಳು ಆಯಿಜೋಲ್, ಮಿಜೋರಂ, ಕೋಹಿಮಾ, ನಾಗಾಲ್ಯಾಂಡ್‌, ಶಿಲ್ಲಾಂಗ್, ಮೇಘಾಲಯ, ದಿಸ್ಪುರ್‌, ಅಸ್ಸಾಂ, ಕೋಲ್ಕತ್ತ, ಪಶ್ಚಿಮ ಬಂಗಾಳ, ದೆಹಲಿ ಇವುಗಳಲ್ಲಿ ಯಾವುದನ್ನಾದರೂ ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿಕೊಳ್ಳಬಹುದು. ಏಪ್ರಿಲ್ 8ರಿಂದ 19ರ ಒಳಗಾಗಿ ಇ–ಮೇಲ್‌ ಮೂಲಕ ಮನವಿ ಸಲ್ಲಿಸಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

ಚುರಾಚಂದಪುರ ಮತ್ತು ಕಾಂಗ್ಪೋಕ್ಪಿಯಲ್ಲಿ ಪರೀಕ್ಷಾ ಕೇಂದ್ರ ತೆರೆಯುವಂತೆ ಝೋಮಿ ವಿದ್ಯಾರ್ಥಿ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಆಯೋಗವು ಈ ಹೇಳಿಕೆ ನೀಡಿತು.

ADVERTISEMENT

ಈ ಎರಡು ಕಡೆಗಳಲ್ಲಿ ಪರೀಕ್ಷಾ ಕೇಂದ್ರ ತೆರೆಯಲು ಸಾಧ್ಯವಿಲ್ಲ ಎಂದು ಮಣಿಪುರ ಸರ್ಕಾರ ತಿಳಿಸಿದೆ ಎಂದೂ ಕೋರ್ಟ್‌ಗೆ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.