ADVERTISEMENT

ಯುಪಿಎಸ್‌ಸಿ: ಎಂಜಿನಿಯರಿಂಗ್‌ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ

ಪಿಟಿಐ
Published 18 ಡಿಸೆಂಬರ್ 2025, 15:22 IST
Last Updated 18 ಡಿಸೆಂಬರ್ 2025, 15:22 IST
ಯುಪಿಎಸ್‌ಸಿ
ಯುಪಿಎಸ್‌ಸಿ   

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಎಂಜಿನಿಯರಿಂಗ್‌ ಸೇವಾ ಪರೀಕ್ಷೆ (ಇಎಸ್‌ಇ) 2025ರ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, 458 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಸಿವಿಲ್‌ ಎಂಜಿನಿಯರಿಂಗ್ ಅಡಿಯಲ್ಲಿ ಅತ್ಯಧಿಕ ಅಂದರೆ 202 ಅಭ್ಯರ್ಥಿಗಳು, ಎಲೆಕ್ಟ್ರಾನಿಕ್ಸ್‌ ಮತ್ತು ಟೆಲಿಕಮ್ಯುನಿಕೇಷನ್‌ನಲ್ಲಿ 116, ಎಲೆಕ್ಟ್ರಿಕಲ್‌ನಲ್ಲಿ 79 ಮತ್ತು ಮೆಕ್ಯಾನಿಕಲ್‌ನಲ್ಲಿ 61 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ಆಗಸ್ಟ್‌ನಲ್ಲಿ ಲಿಖಿತ ಪರೀಕ್ಷೆ, ಅಕ್ಟೋಬರ್‌–ನವೆಂಬರ್‌ನಲ್ಲಿ ವ್ಯಕಿತ್ವ ಪರೀಕ್ಷೆ ನಡೆಸಲಾಗಿತ್ತು. ಆಯೋಗದ ವೆಬ್‌ಸೈಟ್‌ನಲ್ಲಿ (www.upsc.gov.in) ಫಲಿತಾಂಶ ಲಭ್ಯವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.