ADVERTISEMENT

Video | UPSC ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ಕುರಿಗಾಹಿ ಬೀರದೇವ ಅವರ ಸಂದರ್ಶನ

ಪ್ರಜಾವಾಣಿ ವಿಶೇಷ
Published 24 ಏಪ್ರಿಲ್ 2025, 23:30 IST
Last Updated 24 ಏಪ್ರಿಲ್ 2025, 23:30 IST

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಯಮಗೆ ಗ್ರಾಮದ ಬೀರದೇವ ಸಿದ್ದಪ್ಪ ಡೋಣೆ (Birdev Siddappa Done) ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ (UPSC CSE) 551ನೇ ರ್‍ಯಾಂಕ್‌ ಪಡೆದಿದ್ದಾರೆ. ಕುರಿಗಾಹಿಗಳ ಮಗನಾದ ಈ ಯುವಕ ದೇಶವೇ ತಿರುಗಿ ನೋಡುವಂಥ ಸಾಧನೆ ಮಾಡಿದ್ದಾರೆ. ಸಾಧನೆಗೆ ಬಡತನ ಮತ್ತು ಭಾಷೆ ಅಡ್ಡಿಯಾಗುವುದಿಲ್ಲ ಎಂದು ತೋರಿಸಿದ್ದಾರೆ. ಬೆಳಗಾವಿ ಹೊರವಲಯದಲ್ಲಿ ಕುರಿ ಕಾಯುತ್ತಿದ್ದ ಈ ಸಾಧಕ ತಮ್ಮ ಜೀವನ ಹಾಗೂ ಯುಪಿಎಸ್‌ಸಿ ಸಾಧನೆಯ ಬಗ್ಗೆ ಈ ವಿಡಿಯೊದಲ್ಲಿ ಮಾತನಾಡಿದ್ದಾರೆ. ಅಲ್ಲದೆ, ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷಾರ್ಥಿಗಳಿಗೆ ಅನೇಕ ಟಿಪ್ಸ್‌ ಕೂಡ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.