ADVERTISEMENT

ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 119 ಜನರು ಇಂದು ಭಾರತಕ್ಕೆ?

ಪಿಟಿಐ
Published 14 ಫೆಬ್ರುವರಿ 2025, 12:41 IST
Last Updated 14 ಫೆಬ್ರುವರಿ 2025, 12:41 IST
<div class="paragraphs"><p>ಅಮೆರಿಕದ ವಿಮಾನ</p></div>

ಅಮೆರಿಕದ ವಿಮಾನ

   

ಚಂಡೀಗಡ: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ 119 ಭಾರತೀಯರನ್ನು ಹೊತ್ತ ಅಮೆರಿಕದ ವಿಮಾನವು ಶನಿವಾರ ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಸಾಧ್ಯತೆಯಿದೆ. 

ವಿವಿಧ ದೇಶಗಳಿಂದ ಬಂದಿರುವ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರ್ಕಾರ ತೆಗೆದುಕೊಂಡ ಕ್ರಮದ ಭಾಗವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ.

ADVERTISEMENT

ಕಳೆದ ವಾರ ಮೊದಲ ಹಂತದಲ್ಲಿ 104 ಭಾರತೀಯರನ್ನು ಕಳುಹಿಸಿದ್ದ ಅಮೆರಿಕ, ಈ ಬಾರಿ ಎರಡನೇ ಹಂತದಲ್ಲಿ 119 ಜನರನ್ನು ಭಾರತಕ್ಕೆ ಕಳುಹಿಸುತ್ತಿದೆ. ಇವರನ್ನು ಹೊತ್ತ ವಿಮಾನವು ಶನಿವಾರ ಬೆಳಿಗ್ಗೆ 10 ಗಂಟೆಗೆ ಬರುವ ನಿರೀಕ್ಷೆಯಿದೆ. 

119 ಜನರ ಪೈಕಿ ಪಂಜಾಬ್‌ನ 67, ಹರಿಯಾಣದ 33, ಗುಜರಾತಿನ ಎಂಟು, ಉತ್ತರ ಪ್ರದೇಶದ ಮೂವರು, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು ಹಾಗೂ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ತಲಾ ಒಬ್ಬರು ಇದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಲ್ಲದೆ, ಅಮೆರಿಕವು ಇನ್ನಷ್ಟು ಅಕ್ರಮ ವಲಸಿಗರನ್ನು ಮತ್ತೊಂದು ವಿಮಾನದ ಮೂಲಕ ಇದೇ 16ರಂದು (ಭಾನುವಾರ) ಭಾರತಕ್ಕೆ ಕಳುಹಿಸಲಿದೆ ಎಂದು ಮೂಲಗಳು ಹೇಳಿವೆ.

ಕಳೆದ ವಾರ 104 ಅಕ್ರಮ ವಲಸಿಗರಿದ್ದ ಅಮೆರಿಕದ ಸೇನಾ ವಿಮಾನವು ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು. ಅದರಲ್ಲಿ ಹರಿಯಾಣ, ಗುಜರಾತ್‌ನ ತಲಾ 33 ಮಂದಿ ಹಾಗೂ ಪಂಜಾಬ್‌ 30 ಜನರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.