ADVERTISEMENT

ಅರುಣಾಚಲ ಪ್ರದೇಶ ಭಾರತದ ಭಾಗ ಎಂದು ಗುರುತಿಸಿದ ಅಮೆರಿಕ

ಪಿಟಿಐ
Published 21 ಮಾರ್ಚ್ 2024, 3:33 IST
Last Updated 21 ಮಾರ್ಚ್ 2024, 3:33 IST
<div class="paragraphs"><p>ಅಮೆರಿಕ ಧ್ವಜ</p></div>

ಅಮೆರಿಕ ಧ್ವಜ

   

ವಾಷಿಂಗ್ಟನ್‌: ಅರುಣಾಚಲ ಪ್ರದೇಶವು ಭಾರತದ ಭಾಗ ಎಂದು ಅಮೆರಿಕ ಗುರುತಿಸಿದೆ. ವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತ ತನಗೆ ಸೇರಿದ ಜಾಗವೆಂದು ಏಕಪಕ್ಷೀಯವಾಗಿ ಹಕ್ಕುಸಾಧಿಸುವ ಚೀನಾದ ಪ್ರಯತ್ನವನ್ನು ಅಮೆರಿಕ ಬಲವಾಗಿ ವಿರೋಧಿಸುತ್ತದೆ ಎಂದು ಜೋ ಬೈಡೆನ್ ಅವರ ಅಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರ ಅರುಣಾಚಲ ಭೇಟಿಗೆ ಚೀನಾ ವಿರೋಧಿ ವ್ಯಕ್ತಪಡಿಸಿದ ಬೆನ್ನಲ್ಲೇ ಅಮೆರಿಕದಿಂದ ಈ ಹೇಳಿಕೆ ಹೊರಬಿದ್ದಿದೆ.

ADVERTISEMENT

‘ಕ್ಸಿಜಾಂಗ್‌ನ (ಟಿಬೆಟ್‌ನ ಚೈನೀಸ್ ಹೆಸರು) ದಕ್ಷಿಣ ಭಾಗವು ಚೀನಾದ ಅಂತರಿಕ ಭಾಗವಾಗಿದೆ. ಭಾರತ ಅಕ್ರಮವಾಗಿ ಸ್ಥಾಪಿಸಿರುವ ಅರುಣಾಚಲ ಪ್ರದೇಶವನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಅದನ್ನು ಬಲವಾಗಿ ವಿರೋಧಿಸುತ್ತೇವೆ’ ಎಂದು ಚೀನಾದ ರಕ್ಷಣಾ ಇಲಾಖೆಯ ವಕ್ತಾರ ಹಿರಿಯ ಕರ್ನಲ್ ಝಾಂಗ್ ಶಿಯೊಗಂಗ್‌ ಅವರು ಪ್ರಧಾನಿ ಮೋದಿ ಅರುಣಾಚಲ ಭೇಟಿ ಬಳಿಕ ಪ್ರತಿಕ್ರಿಯಿಸಿದ್ದರು.

ಅರುಣಾಚಲ ಪ್ರದೇಶವನ್ನು ಚೀನಾ ದಕ್ಷಿಣ ಟಿಬೆಟ್‌ ಎಂದು ಹೇಳಿಕೊಳ್ಳುತ್ತದೆ. ಅಲ್ಲದೆ ಭಾರತದ ನಾಯಕರು ಅರುಣಾಚಲಕ್ಕೆ ಭೇಟಿ ನೀಡುವುದನ್ನು ವಿರೋಧಿಸುತ್ತದೆ. ಅರುಣಾಚಲವನ್ನು ಝಂಗನ್‌ ಎಂದು ನಾಮಕರಣ ಮಾಡಿದೆ.

ಮಾರ್ಚ್ 9 ರಂದು, ಪ್ರಧಾನಿ ಮೋದಿ ಅವರು ಅರುಣಾಚಲ ಪ್ರದೇಶದಲ್ಲಿ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೆಲಾ ಸುರಂಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದರು. ಇದು ತವಾಂಗ್‌ಗೆ ಸರ್ವ ಋತುವಿನಲ್ಲೂ ಸಂಪರ್ಕ ಕಲ್ಪಿಸುವುದಲ್ಲದೆ, ಗಡಿ ಪ್ರದೇಶದ ಉದ್ದಕ್ಕೂ ಸೈನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.