ADVERTISEMENT

ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕುಟುಂಬ ಸಮೇತ ಜೈಪುರದ ಅಂಬರ್ ಕೋಟೆಗೆ ಭೇಟಿ

ಪಿಟಿಐ
Published 22 ಏಪ್ರಿಲ್ 2025, 9:59 IST
Last Updated 22 ಏಪ್ರಿಲ್ 2025, 9:59 IST
<div class="paragraphs"><p>ಅಂಬರ್ ಕೋಟೆಗೆ&nbsp;ಕುಟುಂಬ ಸಮೇತ&nbsp;ಜೆ.ಡಿ. ವ್ಯಾನ್ಸ್ ಭೇಟಿ</p></div>

ಅಂಬರ್ ಕೋಟೆಗೆ ಕುಟುಂಬ ಸಮೇತ ಜೆ.ಡಿ. ವ್ಯಾನ್ಸ್ ಭೇಟಿ

   

(ರಾಯಿಟರ್ಸ್ ಚಿತ್ರ)

ಜೈಪುರ: ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಇಂದು (ಮಂಗಳವಾರ) ಕುಟುಂಬ ಸಮೇತ ಜೈಪುರದ ಇತಿಹಾಸ ಪ್ರಸಿದ್ಧ ಅಂಬರ್ ಕೋಟೆಗೆ ಭೇಟಿ ನೀಡಿದ್ದಾರೆ.

ADVERTISEMENT

ರಾಜಸ್ಥಾನದ ಜೈಪುರದಲ್ಲಿ ವ್ಯಾನ್ಸ್ ಕುಟುಂಬಕ್ಕೆ ಕೆಂಪು ಹಾಸಿನ ಸ್ವಾಗತ ನೀಡಲಾಯಿತು. ವರ್ಣರಂಜಿತ ರಂಗೋಲಿಗಳು, ಜಾನಪದ ನೃತ್ಯ ಹಾಗೂ ವಿಶೇಷ ಅಲಂಕೃತ ಆನೆಗಳು ಮೆರಗು ತುಂಬಿದವು.

ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಮತ್ತು ಉಪಮುಖ್ಯಮಂತ್ರಿ ದಿಯಾ ಕುಮಾರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ರಾಜಸ್ಥಾನದ ಜಾನಪದ ನೃತ್ಯಗಳನ್ನು ವೀಕ್ಷಿಸಿದರು.

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಪತ್ನಿ ಉಷಾ ವ್ಯಾನ್ಸ್ ಮತ್ತು ದಂಪತಿಯ ಮೂವರು ಮಕ್ಕಳಾದ ಇವಾನ್, ವಿವೇಕ್ ಮತ್ತು ಮಿರಾಬೆಲ್, ಯುನೆಸ್ಕೊ ವಿಶ್ವ ಪರಂಪರೆಯ ತಾಣವಾದ ಕೋಟೆಯಲ್ಲಿ ಸುಮಾರು ಎರಡು ತಾಸು ಸಮಯ ಕಳೆದರು. ಬಳಿಕ ಹೋಟೆಲ್‌ಗೆ ಮರಳಿದರು.

ಭಾರತ-ಅಮೆರಿಕ ಬಾಂಧವ್ಯದ ಕುರಿತು ಜೆ.ಡಿ ವ್ಯಾನ್ಸ್ ಇಂದು ಭಾಷಣ ಮಾಡಲಿದ್ದಾರೆ.

ಅಮೆರಿಕ ಉಪಾಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ ಅಂಬರ್ ಕೋಟೆಯಲ್ಲಿ ಮಧ್ಯಾಹ್ನದವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ವಿಐಪಿ ಚಲನವಲನದ ಹಿನ್ನೆಲೆಯಲ್ಲಿ ವಾಹನ ದಟ್ಟಣೆಯಲ್ಲೂ ವ್ಯತ್ಯಯ ಉಂಟಾಗಿತ್ತು.

ಜೈಪುರದ ಅಂಬರ್ ಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.