ADVERTISEMENT

ಶಾಲೆ ಮಕ್ಕಳು ಪತ್ರಿಕೆ, ಪುಸ್ತಕ ಓದುತ್ತಿಲ್ಲ: ಶಿಕ್ಷಕರ ಅಳಲು

ಐಎಎನ್ಎಸ್
Published 23 ಜೂನ್ 2022, 8:46 IST
Last Updated 23 ಜೂನ್ 2022, 8:46 IST
   

ಲಖನೌ: ಉತ್ತರ ಪ್ರದೇಶದ ಪ್ರಮುಖ ನಗರಗಳ ಪ್ರತಿಷ್ಠಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಪತ್ರಿಕೆ ಓದುವ ಮತ್ತು ಪುಸ್ತಕ ಓದುವ ಆಭ್ಯಾಸದಿಂದ ದೂರ ಇದ್ದಾರೆ ಎಂದು ಶಿಕ್ಷಕರು ದೂರಿದ್ದಾರೆ.

ಉತ್ತರ ಪ್ರದೇಶದ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಜತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಂವಾದ ನಡೆಸಿದ್ದರು. ಅದಾದ ಬಳಿಕ, ಇತರ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳ ಜತೆ ಈ ಕುರಿತು ಪ್ರಶ್ನೆ ಕೇಳಿದ್ದಾರೆ.

ಆ ಸಂದರ್ಭದಲ್ಲಿ, ತಮಗೆ ಪತ್ರಿಕೆಗಳ ಬಗ್ಗೆ ತಿಳಿದಿಲ್ಲ. ಕೆಲವರಂತೂ, ಪ್ರಮುಖ ಪತ್ರಿಕೆಗಳು ಯಾವುದಿದೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಅಲ್ಲದೆ, ಕೆಲವರು ತಾವು ಹೆಡ್‌ಲೈನ್ಸ್ ಮಾತ್ರ ಓದುವುದಾಗಿಯೂ, ಮತ್ತೆ ಕೆಲವರು ಪತ್ರಿಕೆಯಲ್ಲಿ ಬರುವ ಕಾಮಿಕ್ಸ್ ಮತ್ತು ಪಝಲ್‌ಗಳನ್ನು ಮಾತ್ರ ಗಮನಿಸುವುದಾಗಿ ಹೇಳಿಕೊಂಡಿದ್ದಾರೆ.

ವಿದ್ಯಾರ್ಥಿಗಳಲ್ಲಿ ಪುಸ್ತಕ ಮತ್ತು ಪತ್ರಿಕೆ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ ಎಂದು ಶಿಕ್ಷಕರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.