ADVERTISEMENT

ಉತ್ತರಾಖಂಡ: ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 9:49 IST
Last Updated 25 ಸೆಪ್ಟೆಂಬರ್ 2022, 9:49 IST
   

ಡೆಹ್ರಾಡೂನ್‌:ಇಲ್ಲಿನ ರೆಸಾರ್ಟ್‌ ಒಂದರ ಸ್ವಾಗತಗಾರ್ತಿ ಅಂಕಿತಾ ಭಂಡಾರಿ ಎಂಬ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದೆ.

ಕೊಲೆ ಆರೋಪಿಗಳು, ಈ ದುರುಳರು ನನ್ನನ್ನು ವೇಶ್ಯೆಯಾಗಿ ಬದಲಾಯಿಸಲು ನೋಡುತ್ತಿದ್ದಾರೆ. ನನ್ನನ್ನು ಕಾಪಾಡು ಎಂದು ಕೊಲೆಗೂ ಮುಂಚೆ ಅಂಕಿತಾ ತನ್ನ ಗೆಳತಿಗೆ ಮಾಡಿದ ಮೊಬೈಲ್ ಸಂದೇಶದಲ್ಲಿ ಬಹಿರಂಗವಾಗಿದೆ.

ಅಂಕಿತಾ ಭಂಡಾರಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಕೆಲವೇ ತಿಂಗಳು ಹಿಂದೆ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿಕೊಂಡು ವನಂತರ ರೆಸಾರ್ಟ್ ಸ್ವಾಗತಕಾರಿಣಿಯಾಗಿ ಸೇರಿಕೊಂಡಿದ್ದರು ಎನ್ನಲಾಗಿದೆ.

ADVERTISEMENT

ಅಂಕಿತಾ ಕೊಲೆ ಸಂಬಂಧವನಂತರ ರೆಸಾರ್ಟ್‌ನ ಮಾಲೀಕಪುಲ್ಕಿತ್‌ ಆರ್ಯ, ಮ್ಯಾನೇಜರ್‌ ಸೌರಭ್‌ ಭಾಸ್ಕರ್‌ ಮತ್ತು ರೆಸಾರ್ಟ್‌ನ ಉದ್ಯೋಗಿ ಅಂಕಿತ್‌ ಗುಪ್ತಾ ಎಂಬುವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮೂವರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಮುಖ ಆರೋಪಿ ಪುಲ್ಕಿತ್‌,ಉತ್ತರಾಖಂಡ ರಾಜ್ಯ ಬಿಜೆಪಿಯ ಹಿರಿಯ ಮುಖಂಡ ವಿನೋದ್‌ ಆರ್ಯ ಅವರ ಮಗ.

ರಿಷಿಕೇಶ ಸಮೀಪದ ಚೀಲಾ ನಾಲೆಯಲ್ಲಿ19 ವರ್ಷದ ಅಂಕಿತಾ ಮೃತದೇಹ ಶನಿವಾರ ಪತ್ತೆಯಾಗಿದ್ದು, ಎಸ್‌ಡಿಆರ್‌ಎಫ್‌ ಸಿಬ್ಬಂದಿ ಅದನ್ನು ಹೊರತೆಗೆದಿದ್ದಾರೆ.

ಸೆಪ್ಟೆಂಬರ್‌ 18ರಂದು ತನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿದ್ದ ಅಂಕಿತಾ, ರೆಸಾರ್ಟ್‌ಗೆ ಬರುವ ಅತಿಥಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಪುಲ್ಕಿತ್‌ ಹಾಗೂ ರೆಸಾರ್ಟ್‌ನ ಮ್ಯಾನೇಜರ್‌ ಪೀಡಿಸುತ್ತಿರುವ ವಿಚಾರವನ್ನು ಹೇಳಿದ್ದಳು. ತಾನು ಸಂಕಷ್ಟಕ್ಕೆ ಸಿಲುಕಿರುವುದಾಗಿಯೂ ಅಳಲು ತೋಡಿಕೊಂಡಿದ್ದಳು’ ಎಂದು ಡಿಜಿಪಿ ಅಶೋಕ್‌ ಕುಮಾರ್‌ ತಿಳಿಸಿದ್ದಾರೆ.

‘ಅದೇ ದಿನ ರಾತ್ರಿ 8.30ಕ್ಕೆ ಕರೆ ಮಾಡಿದಾಗ ಅಂಕಿತಾ ಮೊಬೈಲ್‌ ಸಂಖ್ಯೆ ಸಂಪರ್ಕಕ್ಕೆ ಸಿಗಲಿಲ್ಲ. ಕೂಡಲೇ ಪುಲ್ಕಿತ್‌ಗೆ ಕರೆ ಮಾಡಿದಾಗ ಆಕೆ ಕೊಠಡಿಗೆ ತೆರಳಿದ್ದಾಗಿ ಹೇಳಿದ್ದ. ಮರುದಿನ ಬೆಳಿಗ್ಗೆ ಮತ್ತೆ ಪುಲ್ಕಿತ್‌ಗೆ ಹಲವು ಬಾರಿ ಕರೆ ಮಾಡಿದೆ. ಆತನ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಬಳಿಕ ಮತ್ತೊಬ್ಬ ಆರೋಪಿ ಅಂಕಿತ್‌ಗೆ ಕರೆ ಮಾಡಿದೆ. ಅಂಕಿತಾ ಜಿಮ್‌ನಲ್ಲಿ ಇರುವುದಾಗಿ ಆತ ಹೇಳಿದ್ದ. ರೆಸಾರ್ಟ್‌ನ ಬಾಣಸಿಗನಿಗೆ ಕರೆ ಮಾಡಿದಾಗ ಆಕೆಯನ್ನು ರೆಸಾರ್ಟ್‌ನಲ್ಲಿ ನೋಡೇ ಇಲ್ಲ ಎಂದು ಆತ ತಿಳಿಸಿದ್ದಾಗಿ ಅಂಕಿತಾಳ ಸ್ನೇಹಿತ ಮಾಹಿತಿ ನೀಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಶನಿವಾರ ಆದೇಶ ಹೊರಡಿಸಿದ್ದಾರೆ. ಡಿಐಜಿ ಪಿ.ರೇಣುಕಾ ದೇವಿ ನೇತೃತ್ವದ ತಂಡವು ಈ ಕುರಿತು ತನಿಖೆ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.