ADVERTISEMENT

ಉತ್ತರಾಖಂಡ| ಭೂಕುಸಿತ; ಧೌಲಿಗಂಗಾ ಯೋಜನೆಯ 2 ಸುರಂಗ ಬಂದ್; ಸಿಲುಕಿದ 19 ಕಾರ್ಮಿಕರು

ಪಿಟಿಐ
Published 31 ಆಗಸ್ಟ್ 2025, 14:13 IST
Last Updated 31 ಆಗಸ್ಟ್ 2025, 14:13 IST
   

ಪಿಥೋರಗಢ: ಉತ್ತರಾಖಂಡದ ಪಿಥೋರಗಢದಲ್ಲಿರುವ ಧೌಲಿಗಂಗಾ ವಿದ್ಯುತ್ ಯೋಜನೆಯ ಸಾಮಾನ್ಯ ಮತ್ತು ತುರ್ತು ಸುರಂಗ ಮಾರ್ಗಗಳು ಭಾನುವಾರ ಭೂಕುಸಿತದಿಂದ ಮುಚ್ಚಿಹೋಗಿದ್ದರಿಂದ ರಾಷ್ಟ್ರೀಯ ಜಲವಿದ್ಯುತ್ ನಿಗಮ ಲಿಮಿಟೆಡ್‌ನ(ಎನ್‌ಎಚ್‌ಪಿಸಿ) ಹತ್ತೊಂಬತ್ತು ಕಾರ್ಮಿಕರು ವಿದ್ಯುತ್ ಕೇಂದ್ರದೊಳಗೆ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಗ್ನಾವಶೇಷಗಳನ್ನು ತೆಗೆದುಹಾಕಲು ಯಂತ್ರಗಳನ್ನು ನಿಯೋಜಿಸಲಾಗಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ದಾರಿಯನ್ನು ತೆರವುಗೊಳಿಸಲಾಗುವುದು. ನಂತರ ಎಲ್ಲ ಕಾರ್ಮಿಕರು ಹೊರಬರಲು ಸಾಧ್ಯವಾಗುತ್ತದೆ ಎಂದು ಧಾರ್ಚುಲಾದ ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿತೇಂದ್ರ ವರ್ಮಾ ಹೇಳಿದ್ದಾರೆ.

ಜಿಲ್ಲೆಯ ಧಾರ್ಚುಲಾ ಬಳಿಯ ಈಲಗಢ ಪ್ರದೇಶದಲ್ಲಿ ಧೌಲಿಗಂಗಾ ವಿದ್ಯುತ್ ಯೋಜನೆಯ ಸಾಮಾನ್ಯ ಮತ್ತು ತುರ್ತು ಸುರಂಗಗಳಿಗೆ ಹೋಗುವ ಮಾರ್ಗವು ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಮುಚ್ಚಿಹೋಗಿದೆ.

ADVERTISEMENT

ನಿರಂತರವಾಗಿ ಮಣ್ಣು ಬೀಳುತ್ತಿದ್ದರೂ ಜೆಸಿಬಿ ಯಂತ್ರಗಳ ಸಹಾಯದಿಂದ ದಾರಿಯನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಮತ್ತು ವಿದ್ಯುತ್ ಕೇಂದ್ರಕ್ಕೆ ದಾರಿ ತೆರೆದ ನಂತರ ಅವರು ಹೊರಬರುತ್ತಾರೆ ಎಂದು ವರ್ಮಾ ತಿಳಿಸಿದ್ದಾರೆ.

ವಿದ್ಯುತ್ ಉತ್ಪಾದನೆಯು ಎಂದಿನಂತೆ ಮುಂದುವರಿಯುತ್ತಿದೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.