ADVERTISEMENT

ನೀರ್ಗಲ್ಲು ಸ್ಪೋಟ: ಉತ್ತರ ಪ್ರದೇಶದ 64 ಮಂದಿ ನಾಪತ್ತೆ

ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಸರ್ಕಾರ

ಪಿಟಿಐ
Published 13 ಫೆಬ್ರುವರಿ 2021, 10:51 IST
Last Updated 13 ಫೆಬ್ರುವರಿ 2021, 10:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಸ್ಪೋಟದಿಂದ ಉಂಟಾದ ಪ್ರವಾಹದಲ್ಲಿ ಉತ್ತರ ಪ್ರದೇಶ ರಾಜ್ಯದ 64 ಮಂದಿ ಕಾಣೆಯಾಗಿದ್ದು, ಐವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಮೃತರನ್ನು ಲಖಿಂಪುರ ಖೇರಿಯವರಾದ ಅವಧೇಶ್(19), ಸೂರಜ್ (20), ವಿಮಲೇಶ್‌(22), ಅಲಿಗಡದ ಅಜಯ್ ಶರ್ಮಾ(32), ಸಹರಾನ್‌ಪುರದ ನಿವಾಸಿ ವಿಕ್ಕಿ ಕುಮಾರ್ ಎಂದು ಗುರುತಿಸಲಾಗಿದೆ.

ಈ ಕುರಿತು ಉತ್ತರ ಪ್ರದೇಶ ಸರ್ಕಾರದ ಪರಿಹಾರ ಕಾರ್ಯ ವಿಭಾಗದ ಆಯುಕ್ತ ಸಂಜಯ್ ಗೋಯಲ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯವರು 23 ಮಂದಿಯನ್ನು ಜೀವಂತವಾಗಿ ರಕ್ಷಿಸಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಫೆಬ್ರವರಿ 13ರಂದು ನಡೆದ ನೀರ್ಗಲ್ಲು ಸ್ಪೋಟದಿಂದ ಉಂಟಾದ ಪ್ರವಾಹದಲ್ಲಿ ನಾಪತ್ತೆಯಾಗಿರುವ 64 ಮಂದಿಯಲ್ಲಿ ‌30 ಮಂದಿ ಲಖಿಂಪುರ ಖೇರಿಯವರಾಗಿದ್ದಾರೆ. ಉಳಿದಂತೆ 10 ಮಂದಿ ಸಹರಾನ್‌ಪುರದವರು, ಶಾವಸ್ತಿಯ ಐವರು, ನಾಲ್ವರು ಗೋರಖ್‌ಪುರದವರು, ರಾಯ್‌ಬರೇಲಿ ಮತ್ತು ಕುಶಿನಗರದಿಂದ ತಲಾ ಇಬ್ಬರು ಮತ್ತು ಸೋನ್‌ ಭದ್ರ, ಮಿರ್ಜಾಪುರ,ಶಹಜಹಾನಪುರ, ಮೊರದಾಬಾದ್‌, ಮಥುರಾ, ಗೌತಮಬುದ್ಧ ಡಿಯೋರಿಯಾ, ಚಂದೌಲಿ, ಬುಲಂದ್‌ಶಹ್ರಾ, ಅಜಮ್‌ಗಡ ಮತ್ತು ಅಮ್ರೋಹಾ ಪ್ರದೇಶದ ತಲಾ ಒಬ್ಬೊಬ್ಬರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.