ADVERTISEMENT

‘ವಂದೇ ಮಾತರಂ’ ಗೀತೆಗೆ 150 ವರ್ಷ: ಉಭಯ ಸದನಗಳಲ್ಲಿ ಚರ್ಚೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 15:26 IST
Last Updated 3 ಡಿಸೆಂಬರ್ 2025, 15:26 IST
<div class="paragraphs"><p>ಸಂಸತ್ ಭವನ</p></div>

ಸಂಸತ್ ಭವನ

   

ನವದೆಹಲಿ: ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬುತ್ತಿರುವುದರಿಂದ ರಾಜ್ಯಸಭೆಯಲ್ಲಿ ಈ ಗೀತೆಯ ಕುರಿತು ಚರ್ಚಿಸಲು 10 ಗಂಟೆ ಮೀಸಲಿಡಲಾಗಿದೆ. ಈ ಚರ್ಚೆಯು ಮಂಗಳವಾರ (ಡಿ.9) ನಡೆಯಲಿದೆ.

ರಾಜ್ಯಸಭೆ ವ್ಯವಹಾರಗಳ ಸಲಹಾ ಸಮಿತಿಯು ಬುಧವಾರ ಸಭೆ ನಡೆಸಿತು. ಈ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಡಿ.10ರಂದು ಇದೇ ವಿಚಾರದ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯಲಿದೆ.

ADVERTISEMENT

‘ವಂದೇ ಮಾತರಂ’ ಗೀತೆಯ ಕುರಿತು ಚರ್ಚೆ ನಡೆದ ಬಳಿಕ ರಾಜ್ಯಸಭೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಚರ್ಚೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.