ADVERTISEMENT

ಇತರ ವೃದ್ಧರೂ ಜೈಲಿನಲ್ಲಿದ್ದಾರೆ, ವರವರ ರಾವ್‌ಗೆ ರಿಯಾಯಿತಿ ಬೇಡ–ಎನ್‌ಐಎ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 15:28 IST
Last Updated 20 ಡಿಸೆಂಬರ್ 2021, 15:28 IST
ವರವರ ರಾವ್
ವರವರ ರಾವ್   

ಮುಂಬೈ: ‘ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಹಲವು ವೃದ್ಧರು ಸಹ ಜೈಲುಗಳಲ್ಲಿದ್ದಾರೆ. ಹಾಗಾಗಿ, ಎಲ್ಗಾರ್ ಪರಿಷತ್– ಮಾವೋವಾದಿ ಪ್ರಕರಣದ ಆರೋಪಿ, ಕವಿ, ಕಾರ್ಯಕರ್ತ ವರವರ ರಾವ್ ಅವರನ್ನು ತಲೋಜಾ ಜೈಲು ಅಧಿಕಾರಿಗಳಿಗೆ ಶರಣಾಗುವಂತೆ ನಿರ್ದೇಶಿಸಬೇಕು’ ಎಂದು ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಸೋಮವಾರ ಬಾಂಬೆ ಹೈಕೋರ್ಟ್‌ ಅನ್ನು ಕೋರಿಕೊಂಡಿದೆ.

ನ್ಯಾಯಮೂರ್ತಿಗಳಾದ ನಿತಿನ್ ಜಮ್ದಾರ್ ಮತ್ತು ಎಸ್‌.ವಿ. ಕೋತ್ವಾಲ್ ಅವರು ವರವರ ರಾವ್ ಅವರು ಶರಣಾಗಲು 2022ರ ಜ. 7ರವರೆಗೆ ಕಾಲಾವಕಾಶ ವಿಸ್ತರಿಸಿರುವುದನ್ನು ಎನ್‌ಐಎ ತನ್ನ ಅರ್ಜಿಯಲ್ಲಿ ಪ್ರಶ್ನಿಸಿದೆ.

ರಾವ್ ಅವರ ವಕೀಲ ಆನಂದ್ ಗ್ರೋವರ್ ಅವರು ಇಲ್ಲಿನ ನಾನಾವತಿ ಆಸ್ಪತ್ರೆಯಿಂದ ಸಲ್ಲಿಸಿದ ವೈದ್ಯಕೀಯ ಪರೀಕ್ಷೆಯ ವರದಿಗಳಿಗೆ ಪ್ರತಿಕ್ರಿಯಿಸಿ ಅಫಿಡವಿಟ್ ಸಲ್ಲಿಸಲು ಸಮಯ ಕೋರಿದ್ದರಿಂದ, ಶರಣಾಗತಿಗೆ ಮತ್ತಷ್ಟು ಸಮಯ ವಿಸ್ತರಿಸುವುದನ್ನು ಎನ್‌ಐಎ ವಿರೋಧಿಸಿತು.

ADVERTISEMENT

‘ರಾವ್ ಅವರಿಗೆ ಈ ವರ್ಷದ ಫೆಬ್ರುವರಿಯಲ್ಲಿ ಆರು ತಿಂಗಳ ಕಾಲ ತಾತ್ಕಾಲಿಕ ವೈದ್ಯಕೀಯ ಜಾಮೀನು ನೀಡಲಾಗಿದೆ. ಸೆ. 5ರಂದು ಅವರು ಶರಣಾಗಬೇಕಿತ್ತು. ಆದರೆ, ಅವರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎನ್ನುವ ಕಾರಣದಿಂದ ರಾವ್‌ ಅವರ ಪರ ವಕೀಲರು ಮತ್ತೆ ಜಾಮೀನು ಅರ್ಜಿ ಸಲ್ಲಿಸಿದ್ದರು’ ಎಂದು ಎನ್‌ಐಎ ನ್ಯಾಯಾಲಯದ ಗಮನಕ್ಕೆ ತಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.