ADVERTISEMENT

ಅಂತರರಾಷ್ಟ್ರೀಯ ಉತ್ಸವವಾಗಿ ಬದಲಾದ ಓಣಂ: ಮನದ ಮಾತು ಕಾರ್ಯಕ್ರಮದಲ್ಲಿ ಮೋದಿ ಮಾತು

ಏಜೆನ್ಸೀಸ್
Published 30 ಆಗಸ್ಟ್ 2020, 6:38 IST
Last Updated 30 ಆಗಸ್ಟ್ 2020, 6:38 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಓಣಂ ಹಬ್ಬವೀಗ ಅಂತರರಾಷ್ಟ್ರೀಯ ಉತ್ಸವವಾಗಿ ಬದಲಾಗಿದೆ ಎಂದುಪ್ರಧಾನಿ ನರೇಂದ್ರ ಮೋದಿ ಅವರು ‘ಮನದ ಮಾತು’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಪ್ರತಿ ತಿಂಗಳು ನಡೆಸುವ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಓಣಂ ಸಂಭ್ರಮವು ಇದೀಗ ವಿದೇಶಗಳ ದೂರದ ತೀರವನ್ನು ತಲುಪಿದೆ.ಅಮೆರಿಕ, ಯುರೋಪ್ ಅಥವಾ ಕೊಲ್ಲಿ ರಾಷ್ಟ್ರಗಳೇ ಆಗಿರಲಿ, ಓಣಂನ ಓಜಸ್ಸನ್ನುಎಲ್ಲೆಡೆ ಅನುಭವಿಸಬಹುದು. ಓಣಂ ಇದೀಗ ಅಂತರರಾಷ್ಟ್ರೀಯ ಉತ್ಸವವಾಗಿ ಹೊರಹೊಮ್ಮುತ್ತಿದೆ’ ಎಂದರು.

‘ಓಣಂ ಹಬ್ಬವನ್ನು ಸಂತೋಷ ಮತ್ತು ಉತ್ಸಾಹದಿಂದ ಚಿಂಗಂ (ಸಿಂಹ) ಮಾಸದಲ್ಲಿ ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಜನರು ಒಂದಿಷ್ಟು ಹೊಸತನ್ನು ಖರೀದಿಸುತ್ತಾರೆ. ಮನೆಗಳನ್ನು ಅಲಂಕರಿಸುತ್ತಾರೆ. ಪೂಕಳಮ್‌ಗಾಗಿ ತಯಾರಿ ನಡೆಸುವ ಮೂಲಕ ಓಣಂ ಅನ್ನು ಸಂಭ್ರಮಿಸುತ್ತಾರೆ. ವಿವಿಧ ರೀತಿಯ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ’ ಎಂದುತಿಳಿಸಿದ್ದಾರೆ.

ADVERTISEMENT

ನಮ್ಮ ಹಬ್ಬಗಳು ಮತ್ತು ಪ್ರಕೃತಿಯ ನಡುವೆ ನಿಕಟವಾದ ಸಂಬಂಧವಿದೆ ಎಂದಿರುವ ಮೋದಿ, ‘ಇದು ಹಬ್ಬಗಳನ್ನು ಆಚರಿಸುವ ಸಮಯ ಮತ್ತು ಅದೇರೀತಿ ಕೋವಿಡ್–19 ಸನ್ನಿವೇಶ ಇರುವುದರಿಂದ ಎಚ್ಚರಿಕೆಯನ್ನೂ ವಹಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.