ADVERTISEMENT

ಒಡಿಯಾ ಚಿತ್ರರಂಗದ ಜನಪ್ರಿಯ ನಟಿ ಝರ್ನಾ ದಾಸ್‌ ನಿಧನ ‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2022, 6:28 IST
Last Updated 2 ಡಿಸೆಂಬರ್ 2022, 6:28 IST
   

ಒಡಿಯಾ ಚಿತ್ರರಂಗದ ಜನಪ್ರಿಯ ನಟಿ ಝರ್ನಾ ದಾಸ್‌(77) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ಮನೆಯಲ್ಲಿಯೇ ನಿಧನರಾಗಿದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ದಾಸ್‌, ಸಿನಿಮಾ ಕ್ಷೇತ್ರದಲ್ಲಿನ ಜೀವನಶ್ರೇಷ್ಠ ಸಾಧನೆಗಾಗಿ ರಾಜ್ಯ ಸರ್ಕಾರದ ಪ್ರತಿಷ್ಟಿತ ಪ್ರಶಸ್ತಿ ಜಯದೇವ್‌ ಪುರಸ್ಕಾರ ಪಡೆದಿದ್ದರು. 1960ರ ದಶಕದ ಜನಪ್ರಿಯ ನಟಿಯಾಗಿದ್ದ ದಾಸ್‌ ಶ್ರೀ ಜಗನ್ನಾಥ, ನಾರಿ, ಅದಿನಮೇಘ, ಅಭಿನೇತ್ರಿ ಮೊದಲಾದ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದರು.

ಬಾಲನಟಿಯಾಗಿ, ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಕೂಡ ಜನಪ್ರಿಯರಾಗಿದ್ದರು. ಕತಕ್‌ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಹರೇಕೃಷ್ಣ ಮಹ್ತಾಬ್‌ ಜೀವನಾಧಾರಿತ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದರು.

ADVERTISEMENT

ರಾಷ್ಟ್ರಪತಿ ಮುರ್ಮು, ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಸೇರಿದಂತೆ ದೇಶದ ಅನೇಕ ಗಣ್ಯರು ದಾಸ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಒಡಿಶಾ ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.