ಅಣ್ಣಾಮಲೈ
– ಪಿಟಿಐ ಚಿತ್ರ
ಚೆನ್ನೈ,: ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಸೋಮವಾರ, ನಟ,ರಾಜಕಾರಣಿ ವಿಜಯ್ ಅವರ ಮೇಲೆ ವಾಗ್ದಾಳಿ ನಡೆಸಿದ್ದು, ಅವರನ್ನು ಡಿಎಂಕೆಯ ‘ಬಿ-ಟೀಮ್’ಎಂದು ಕರೆದಿದ್ದಾರೆ.
ಅಲ್ಲದೆ, ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ಪಕ್ಷವು, ಅಧಿಕಾರವನ್ನು ಉಳಿಸಿಕೊಳ್ಳಲು ಆಡಳಿತ ಪಕ್ಷ ಡಿಎಂಕೆಯ ರಹಸ್ಯ ಯೋಜನೆ ಎಂದು ಕರೆದಿದ್ದಾರೆ.
ಟಿವಿಕೆಯ ಕೆಲವು ನಾಯಕರು ಬಿಜೆಪಿಯನ್ನು ಟೀಕಿಸುತ್ತಿದ್ದಾರೆ ಎಂಬ ವರದಿಗಾರರ ಪ್ರಶ್ನೆಗಳಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಟಿವಿಕೆ ಸಂಸ್ಥಾಪಕ ವಿಜಯ್ ಅವರನ್ನು ‘ವರ್ಕ್ ಫ್ರಂ ಹೋಮ್’ ರಾಜಕಾರಣಿಯಾಗುವ ಬದಲು ಕ್ಷೇತ್ರಕ್ಕೆ ಬರುವಂತೆ ಮಾಜಿ ಐಪಿಎಸ್ ಅಧಿಕಾರಿ ಸವಾಲು ಹಾಕಿದ್ದಾರೆ.
ನಟ, ರಾಜಕಾರಣಿ ವಿಜಯ್ ಪರದೆಯ ಮೇಲೆ ಮಹಿಳೆಯರ ಜೊತೆ ನಟಿಸುತ್ತಿದ್ದಾಗ ನಮ್ಮ ಪಕ್ಷ ಬಿಜೆಪಿಯ ಕಾರ್ಯಕರ್ತರು ಸಾರ್ವಜನಿಕ ಕಲ್ಯಾಣಕ್ಕಾಗಿ ಹೋರಾಡುತ್ತಿದ್ದರು ಎಂದು ಅಣ್ಣಾಮಲೈ ಹೇಳಿದ್ದಾರೆ.
ಟಿವಿಕೆಯ ಚಟುವಟಿಕೆಗಳನ್ನು ನೋಡಿದ ನಂತರ ವಿಜಯ್ ಡಿಎಂಕೆಯ ಬಿ ಟೀಮ್ ಎಂದು ಪ್ರತಿಪಾದಿಸುತ್ತಿದ್ದೇನೆ. ಡಿಎಂಕೆ ಅಧಿಕಾರವನ್ನು ಉಳಿಸಿಕೊಳ್ಳಲು ರೂಪಿಸಿರುವ ರಹಸ್ಯ ಯೋಜನೆ ಟಿವಿಕೆಯಾಗಿದೆ. ನರ್ಯಾದೆ ಬೇಕೆಂದರೆ ಅವರು ಮೊದಲು ಮರ್ಯಾದೆ ಕೊಡಬೇಕು ಎಂದಿದ್ದಾರೆ.
‘ನೀವು (ವಿಜಯ್) ಪರದೆಯ ಮೇಲೆ ಧೂಮಪಾನ ಮತ್ತು ಮದ್ಯಪಾನ ಮಾಡುತ್ತೀರಿ. ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಮದ್ಯದ ಚಿಲ್ಲರೆ ವ್ಯಾಪಾರ ಸಣಸ್ಥೆ ಟಿಎಎಸ್‌ಎಸಿ ಬಗ್ಗೆ ಮಾತನಾಡಲು ನಿಮಗೆ ಏನು ಹಕ್ಕಿದೆ’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.