ADVERTISEMENT

ಸೆಪ್ಟೆಂಬರ್ 13 ರಿಂದ ಟಿವಿಕೆ ನಾಯಕ, ನಟ ವಿಜಯ್ ತಮಿಳುನಾಡು ಸಂಚಾರ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 14:35 IST
Last Updated 9 ಸೆಪ್ಟೆಂಬರ್ 2025, 14:35 IST
<div class="paragraphs"><p>ಟಿವಿಕೆ ನಾಯಕ, ನಟ ವಿಜಯ್ (ಪಿಟಿಐ ಸಂಗ್ರಹ ಚಿತ್ರ)</p></div>

ಟಿವಿಕೆ ನಾಯಕ, ನಟ ವಿಜಯ್ (ಪಿಟಿಐ ಸಂಗ್ರಹ ಚಿತ್ರ)

   

ಚೆನ್ನೈ: ಮದುರೈನಲ್ಲಿ ನಡೆದ ಪಕ್ಷದ ಎರಡನೇ ರಾಜ್ಯ ಮಟ್ಟದ ಸಮ್ಮೆಳನದಲ್ಲಿ ಸಿಕ್ಕ ಪ್ರತಿಕ್ರಿಯೆಗಳಿಂದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ, ನಟ ವಿಜಯ ಉತ್ಸಾಹ ಹೆಚ್ಚಿಸಿಕೊಂಡಿದ್ದಾರೆ. ಸೆಪ್ಟೆಂಬರ್ 13ರಿಂದ ರಾಜ್ಯದ ತಿರುಚಿರಾಪಳ್ಳಿಯಿಂದ ತಮಿಳುನಾಡಿನ ಎಲ್ಲಾ ಜಿಲ್ಲೆಗಳಿಗೆ ಅವರು ಪ್ರವಾಸ ಕೈಗೊಳ್ಳಲಿದ್ದಾರೆ. 

ಅವರ ಈ ಪ್ರವಾಸ ರಾಜ್ಯದ ಎಲ್ಲಾ 38 ಜಿಲ್ಲೆಗಳನ್ನು ಒಳಗೊಳ್ಳಲಿದೆ. ಸೆಪ್ಟೆಂಬರ್ 13ರಿಂದ ಡಿಸೆಂಬರ್‌ 20ರವರೆಗಿನ ಪ್ರತಿ ಶನಿವಾರ ಅವರು ಎರಡರಿಂದ ನಾಲ್ಕು ಜಿಲ್ಲೆಗಳನ್ನು ಸುತ್ತಾಡಲಿದ್ದು, ಅಕ್ಟೋಬರ್ 5ರ ಭಾನುವಾರ ಒಂದು ಜಿಲ್ಲೆಯಲ್ಲಿ ಪ್ರವಾಸದಲ್ಲಿರಲಿದ್ದಾರೆ.

ADVERTISEMENT

ಈ ಮಾಹಿತಿಯನ್ನೊಳಗೊಂಡ ಪತ್ರವನ್ನು ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್‌. ಆನಂದ್ ಅವರು ಡಿಜಿಪಿಗೆ ಸಲ್ಲಿಸಿದ್ದು, ಸಾರ್ವಜನಿಕ ಪ್ರವಾಸಕ್ಕೆ ಅನುಮತಿ ಮತ್ತು ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದಾರೆ.

ಆಗಸ್ಟ್ 21ರಂದು ಮದುರೈನಲ್ಲಿ ಪಕ್ಷದ ರಾಜ್ಯ ಮಟ್ಟದ ಎರಡನೇ ಸಮ್ಮೆಳನ ನಡೆದಿತ್ತು. ಸಭೆಯು ಭಾರಿ ಸಂಖ್ಯೆಯ ಜನರನ್ನು ಸೆಳೆದಿದ್ದು, ತಮ್ಮ ಪ್ರಾಥಮಿಕ ಎದುರಾಳಿ ಆಡಳಿತಾರೂಢ ಡಿಎಂಕೆ ಎಂದು ವಿಜಯ್ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.