ADVERTISEMENT

ಪ್ರಧಾನಿ ಮೋದಿ ಟೀಕಿಸಿ ವ್ಯಂಗ್ಯಚಿತ್ರ: ‘ವಿಕಟನ್’ ವೆಬ್‌ಸೈಟ್‌ಗೆ ನಿರ್ಬಂಧ?

ಪಿಟಿಐ
Published 16 ಫೆಬ್ರುವರಿ 2025, 2:54 IST
Last Updated 16 ಫೆಬ್ರುವರಿ 2025, 2:54 IST
<div class="paragraphs"><p>ವಿಕಟನ್‌ ವೆಬ್‌ಸೈಟ್‌ ಲೋಗೋ</p></div>

ವಿಕಟನ್‌ ವೆಬ್‌ಸೈಟ್‌ ಲೋಗೋ

   

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯನ್ನು ಟೀಕಿಸುವ ವ್ಯಂಗ್ಯಚಿತ್ರವನ್ನು ಪ್ರಕಟಿಸಿದ ಕಾರಣಕ್ಕೆ ಓದುಗರು ನಮ್ಮ ವೆಬ್‌ಸೈಟ್‌ ವೀಕ್ಷಿಸಲು ಸಾಧ್ಯ‌ವಾಗುತ್ತಿಲ್ಲ ಎಂದು ತಮಿಳುನಾಡಿನ ಜನಪ್ರಿಯ ವೆಬ್‌ಸೈಟ್‌ ‘ವಿಕಟನ್‌’ ಆರೋಪಿಸಿದೆ.

‘ವಿಕಟನ್’ ವಿರುದ್ಧ ತಮಿಳುನಾಡಿನ ಬಿಜೆಪಿ ರಾಜ್ಯ ಘಟಕ ಕೇಂದ್ರ ಸರ್ಕಾರಕ್ಕೆ ದೂರು ನೀಡಿತ್ತು.

ADVERTISEMENT

‘ವಿಕಟನ್‌ ವೆಬ್‌ಸೈಟ್‌ ಅನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ ಎಂಬ ಹಲವು ವರದಿಗಳು ಬಂದಿವೆ. ವೆಬ್‌ಸೈಟ್‌ ವೀಕ್ಷಿಸಲು ಸಾಧ್ಯವಾಗದಿರುವ ಬಗ್ಗೆ ಓದುಗರು ತಿಳಿಸಿದ್ದಾರೆ. ಆದರೆ, ವೆಬ್‌ಸೈಟ್‌ ಅನ್ನು ನಿರ್ಬಂಧಿಸಿರುವ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಸೂಚನೆ ನೀಡಿಲ್ಲ’ ಎಂದು ವಿಕಟನ್‌ ವೆಬ್‌ಸೈಟ್‌ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದೆ.

ಭಾರತೀಯರ ವಲಸಿಗರ ಕೈಗೆ ಕೋಳ ಹಾಕಿ ಅಮೆರಿಕವು ಗಡೀಪಾರು ಮಾಡಿರುವ ಕುರಿತು ಪ್ರಧಾನಿ ಮೋದಿ ಮೌನವಹಿಸಿರುವುದನ್ನು ಟೀಕಿಸಿ ‘ವಿಕಟನ್ ಪ್ಲಸ್‌’ ಡಿಜಿಟಲ್ ನಿಯತಕಾಲಿಕೆ ವೆಬ್‌ಸೈಟ್‌ನಲ್ಲಿ ಫೆ.10ರಂದು ವ್ಯಂಗ್ಯಚಿತ್ರವೊಂದನ್ನು ಪ್ರಕಟಿಸಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎದುರು ಪ್ರಧಾನಿ ಮೋದಿ ಅವರು ಕೈಗೆ ಕೋಳ ಹಾಕಿಕೊಂಡು ಕುಳಿತಿರುವ ಹಾಗೆ ಚಿತ್ರಿಸಲಾಗಿತ್ತು.

‘ವಿಕಟನ್‌’ ಪ್ರಕಟಿಸಿದ್ದ ವ್ಯಂಗ್ಯಚಿತ್ರದ ಬಗ್ಗೆ ಬಿಜೆಪಿ ಟೀಕೆ ಮಾಡಿತ್ತು ಮತ್ತು ಈ ಬಗ್ಗೆ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವೆಬ್‌ಸೈಟ್‌ ಮೇಲಿನ ನಿರ್ಬಂಧದ ಹಿಂದಿನ ಕಾರಣಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇವೆ ಮತ್ತು ಈ ಬಗ್ಗೆ ಕೇಂದ್ರ ಮಾಹಿತಿ ಸಚಿವಾಲಯಕ್ಕೆ ತಿಳಿಸಲಾಗಿದೆ ಎಂದು ವಿಕಟನ್‌ ಹೇಳಿದೆ.

ವಿಕಟನ್‌ಪ್ಲಸ್‌ನಲ್ಲಿ ಪ್ರಕಟವಾಗಿರುವ ವ್ಯಂಗ್ಯಚಿತ್ರ

ಸ್ಟಾಲಿನ್‌ ಖಂಡನೆ

‘ಅಭಿಪ್ರಾಯವನ್ನು ವ್ಯಕ್ತಪಡಿಸಿದ ಕಾರಣಕ್ಕೆ ಮಾಧ್ಯಮವನ್ನು ನಿರ್ಬಂಧಿಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಇದನ್ನು ಖಂಡಿಸುತ್ತೇವೆ‘ ಎಂದು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌ ಅವರು ಹೇಳಿದ್ದಾರೆ. ಕಾಂಗ್ರೆಸ್‌ ಮತ್ತು ಟಿವಿಕೆಯ ನಾಯಕರು ಸೇರಿದಂತೆ ಹಲವರು ಕೇಂದ್ರಸರ್ಕಾರವನ್ನು ಟೀಕಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.