ADVERTISEMENT

‘ಹೊರಗಿನವರಿಗೆ ಪ್ರವೇಶವಿಲ್ಲ’ ಫಲಕ ಅಳವಡಿಕೆ

ಸಾಮಾಜಿಕ ಸಾಮರಸ್ಯ ಹಾಳುಗೆಡವಲು ಅವಕಾಶ ಕೊಡುವುದಿಲ್ಲ; ರುದ್ರಪ್ರಯಾಗ ಡಿಎಸ್‌ಪಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 14:37 IST
Last Updated 8 ಸೆಪ್ಟೆಂಬರ್ 2024, 14:37 IST
.
.   

ರುದ್ರಪ್ರಯಾಗ (ಪಿಟಿಐ): ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಹಲವೆಡೆ ಗ್ರಾಮಸ್ಥರು ತಮ್ಮ ಹಳ್ಳಿಗಳ ಪ್ರವೇಶದ್ವಾರದಲ್ಲಿ ‘ಹೊರಗಿನವರ ಪ್ರವೇಶ ನಿಷೇಧಿಸಲಾಗಿದೆ’ ಎಂಬ ಫಲಕಗಳನ್ನು ಅಳವಡಿಸಿದ್ದಾರೆ.

ಈ ಹಿಂದೆ ‘ಹಿಂದೂಗಳಲ್ಲದವರ ಪ್ರವೇಶವನ್ನು ನಿಷೇಧಿಸಲಾಗಿದೆ’ ಎಂಬ ಫಲಕಗಳನ್ನು ಅಳವಡಿಸಲಾಗಿತ್ತು. ಆದರೆ, ಈಗ ಹಳ್ಳಿಗಳಿಗೆ ಹೊರಗಿನವರು ಪ್ರವೇಶಿಸುವುದನ್ನು ನಿಷೇಧಿಸಿರುವ ಫಲಕಗಳನ್ನು ಹಾಕಲಾಗಿದೆ.

‘ಗ್ರಾಮಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಿದ ನಂತರ, ಅಪರಿಚಿತ ಮಾರಾಟಗಾರರು ನಮ್ಮ ಗ್ರಾಮವನ್ನು ಪ್ರವೇಶಿಸುವುದನ್ನು ತಡೆಯಲು ಊರಿನ ಪ್ರವೇಶದ್ವಾರದಲ್ಲಿಯೇ ಈ ರೀತಿಯ ಬರಹವಿರುವ ಫಲಕಗಳನ್ನು ಅಳವಡಿಸಿದ್ದೇವೆ‘ ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

‘ಹೊರಗಿನಿಂದ ಬಂದವರು ಊರಿನ ದೇವಾಲಯಗಳು ಹಾಗೂ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದಾರೆ ಎಂಬ ಸುದ್ದಿಯ ನಂತರ ಸ್ಥಳೀಯರು ಸುಮಾರು 20–25 ದಿನದ ಹಿಂದೆ ಈ ರೀತಿಯ ಫಲಕಗಳನ್ನು ಹಾಕಿದ್ದಾರೆ‘ ಎಂದು ಫಾಟಾ ಗ್ರಾಮದ ನಿವಾಸಿಯೊಬ್ಬರು ಹೇಳಿದ್ದಾರೆ.

ಈ ಮೊದಲು ಅಳವಡಿಸಲಾಗಿದ್ದ ‘ಹಿಂದೂಗಳಲ್ಲದವರ ಪ್ರವೇಶ ನಿಷೇಧಿಸಲಾಗಿದೆ‘ ಎನ್ನುವ ಫಲಕಗಳನ್ನು ಪೊಲೀಸರ ಮಧ್ಯಪ್ರವೇಶದ ಬಳಿಕ ಬದಲಾಯಿಸಲಾಯಿತು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ತಕ್ಷಣವೇ ಕ್ರಮ: ‘ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡವಲು ಯಾರಿಗೂ ಅವಕಾಶ ಕೊಡುವುದಿಲ್ಲ’ ಎಂದು ರುದ್ರ‍ಪ್ರಯಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಬೋಧ್ ಗಿಲ್ದಿಯಾಲ್‌ ಸುದ್ದಿಸಂಸ್ಥೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.