ADVERTISEMENT

ಅಮೆರಿಕ: ಭಾರತದ ರಾಯಭಾರಿಯಾಗಿ ಕ್ವಾತ್ರಾ ಅಧಿಕಾರ ಸ್ವೀಕಾರ

ಪಿಟಿಐ
Published 14 ಆಗಸ್ಟ್ 2024, 14:02 IST
Last Updated 14 ಆಗಸ್ಟ್ 2024, 14:02 IST
<div class="paragraphs"><p>ವಿನಯ್‌ ಮೋಹನ್‌ ಕ್ವಾತ್ರಾ</p></div>

ವಿನಯ್‌ ಮೋಹನ್‌ ಕ್ವಾತ್ರಾ

   

ವಾಷಿಂಗ್ಟನ್‌: ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ವಿನಯ್‌ ಮೋಹನ್‌ ಕ್ವಾತ್ರಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ನಿವೃತ್ತ ವಿದೇಶಾಂಗ ಕಾರ್ಯದರ್ಶಿಯಾಗಿರುವ ಕ್ವಾತ್ರಾ ಅವರು, ಅಮೆರಿಕದ ರಾಜಧಾನಿ ತಲುಪಿದ್ದಾರೆ.

ADVERTISEMENT

ತರಣ್‌ಜೀತ್‌ ಸಿಂಗ್‌ ಸಂಧು ಅವರು ಜನವರಿಯಲ್ಲಿ ನಿವೃತ್ತರಾದ ಬಳಿಕ ಖಾಲಿ ಇದ್ದ ರಾಯಭಾರಿ ಹುದ್ದೆಗೆ ಭಾರತವು ಜುಲೈ 19ರಂದು ಕ್ವಾತ್ರಾ ಅವರನ್ನು ನೇಮಿಸಿತ್ತು.  

‘ಭಾರತದ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಲು ಖುಷಿಯಾಗುತ್ತಿದೆ. ಎರಡು ದೇಶಗಳ ನಡುವಿನ ಬಾಂಧವ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ರಾಯಭಾರ ಕಚೇರಿಯ ತಂಡವು ತನ್ನ ಕೆಲಸವನ್ನು ಮುಂದುವರಿಸಲಿದೆ’ ಎಂದು ಕ್ವಾತ್ರಾ ಅವರು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಕ್ವಾತ್ರಾ ಅವರು ಈ ಹಿಂದೆ ಫ್ರಾನ್ಸ್ ಮತ್ತು ನೇಪಾಳದಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.