
ದೇಶದ ಜನರಲ್ಲಿ ವೈರಾಣು ಸೋಂಕಿನ ಪ್ರಕರಣಗಳು 2025ರ ಅವಧಿಯಲ್ಲಿ ಹೆಚ್ಚಾಗಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ಅಡಿ ಬರುವ ಎಲ್ಲ ಪ್ರಯೋಗಾಲಯಗಳಲ್ಲಿ ದೇಶದಾದ್ಯಂತ 4.5 ಲಕ್ಷ ರೋಗಿಗಳನ್ನು ಪರೀಕ್ಷಿಸಲಾಗಿದೆ. ಇವರಲ್ಲಿ ಶೇ 11.1ರಷ್ಟು ಮಂದಿಯಲ್ಲಿ ರೋಗಕಾರಕ ವೈರಾಣುಗಳು ಪತ್ತೆಯಾಗಿವೆ. ಈ ಬಗ್ಗೆ ಐಸಿಎಂಆರ್ ಇತ್ತೀಚೆಗೆ ವರದಿ ಬಿಡುಗಡೆ ಮಾಡಿದೆ. ಪ್ರತೀ ವರ್ಷವು ಐಸಿಎಂಆರ್ ಇಂಥ ಪರೀಕ್ಷೆಗಳನ್ನು ನಡೆಸುತ್ತದೆ
ಅವಧಿ;ಮಾದರಿಗಳ ಸಂಖ್ಯೆ;ಸೋಂಕಿನ ಪ್ರಕರಣಗಳು;ಸೋಂಕು ಹರಡುವಿಕೆ ಪ್ರಮಾಣ
ಜನವರಿಯಿಂದ ಮಾರ್ಚ್;2.28 ಲಕ್ಷ;24,502;ಶೇ 10.7
ಏಪ್ರಿಲ್‌ನಿಂದ ಜೂನ್;2.26 ಲಕ್ಷ;26,055;ಶೇ 11.5
1. ತೀವ್ರ/ಸಾಮಾನ್ಯ ಉಸಿರಾಟ ಸಂಬಂಧಿ ಸೋಂಕಿನಲ್ಲಿ ಇನ್‌ಫ್ಲುಯನ್ಝಾ ಪತ್ತೆ
2. ತೀವ್ರ ಜ್ವರ ಪ್ರಕರಣಗಳಲ್ಲಿ ಡೆಂಗಿ ಸೋಂಕು ಮತ್ತು ತೀವ್ರ ರಕ್ತಸ್ರಾವ ಆಗುವುದು ಪತ್ತೆ
3. ಜಾಂಡೀಸ್ ಪ್ರಕರಣಗಳಲ್ಲಿ ಹೆಪಟೈಟೀಸ್ ಎ ಪತ್ತೆ
4. ಅತಿಸಾರ ಪ್ರಕರಣಗಳಲ್ಲಿ ನೋರೊವೈರಸ್ ಪತ್ತೆ
5. ಮಿದುಳಿನ ತೀವ್ರ ಉರಿಯೂತ ಪ್ರಕರಣಗಳಲ್ಲಿ ಹರ್ಪಿಸ್ ಸಿಂಪ್ಲೆಕ್ಸ್ ವೈರಾಣು ಪತ್ತೆ
‘ಎಚ್ಚರಿಕೆ ಗಂಟೆ’
ವೈರಾಣು ಹರಡುವಿಕೆಯ ಪ್ರಮಾಣದ ಏರಿಕೆಯು ದೊಡ್ಡ ಮಟ್ಟದಲ್ಲಿ ಇಲ್ಲ. ಆದರೂ ಇದನ್ನು ಕಡೆಗಣಿಸಲು ಸಾಧ್ಯವಿಲ್ಲ. ಇದೇ ರೀತಿ ತ್ರೈಮಾಸಿಕದ ಅವಧಿಯಲ್ಲಿ ಇಂಥ ಪರಿಶೀಲನೆಗಳನ್ನು ನಡೆಸಿದರೆ, ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದುಹಿರಿಯ ವಿಜ್ಞಾನಿಗಳು
ಆಧಾರ: ಪಿಟಿಐ