ADVERTISEMENT

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಸೋಂಕು ತಗುಲಿತೆಂಬುದು ಸುಳ್ಳು ಸುದ್ದಿ 

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 7:21 IST
Last Updated 6 ಏಪ್ರಿಲ್ 2020, 7:21 IST
   
""

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ ಎಂಬ ಟಿ.ವಿ ವಾಹಿನಿಯೊಂದರ ವರದಿಯ ಸ್ಕ್ರೀನ್‌ಶಾಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಹಿಂದಿ ಭಾಷೆಯ ಪ್ರತಿಷ್ಠಿತ ಸುದ್ದಿವಾಹಿನಿಯಲ್ಲಿ ಪ್ರಸಾರವಾಗಿರುವ ಅಮಿತ್‌ ಶಾ ಅವರ ವರದಿಯೊಂದರ ಸ್ಕ್ರೀನ್‌ಶಾಟ್‌ ಮೇಲೆ ’ಗೃಹ ಸಚಿವರಿಗೆ ಕೊರೊನಾ ವೈರಸ್‌ ತಗುಲಿದೆ,' ಎಂದು ಬ್ರೇಕಿಂಗ್‌ ನ್ಯೂಸ್‌ ನೀಡಲಾಗಿದೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಿಐಬಿ (ಪ್ರೆಸ್‌ ಇನ್ಫರ್ಮೆಷನ್‌ ಬ್ಯೂರೋ) ಇದು ಸುಳ್ಳು ಎಂದು ಹೇಳಿದೆ. ಚಿತ್ರವನ್ನು ದುರುದ್ದೇಶದೊಂದಿಗೆ ತಿದ್ದಲಾಗಿದೆ. ಫೋಟೋಶಾಪ್‌ ಮಾಡಲಾಗಿರುವ ಈ ಸುದ್ದಿ ಸುಳ್ಳು ಎಂದು ತಿಳಿಸಿದೆ.

ADVERTISEMENT

ಅಲ್ಲದೆ, ಚಿತ್ರವನ್ನು ಹಂಚದಂತೆಯೂ ಸಲಹೆ ನೀಡಿದೆ.

ತಿದ್ದಲಾದ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.