ADVERTISEMENT

ತರಗತಿಯಲ್ಲೇ ವಿದ್ಯಾರ್ಥಿಯೊಂದಿಗೆ ಪ್ರಾಧ್ಯಾಪಕಿ ವಿವಾಹ; ಹರಿದಾಡಿದ ವಿಡಿಯೊ

ಪಿಟಿಐ
Published 29 ಜನವರಿ 2025, 12:57 IST
Last Updated 29 ಜನವರಿ 2025, 12:57 IST
<div class="paragraphs"><p>ಮದುವೆ ವಿಡಿಯೊದಲ್ಲಿನ ದೃಶ್ಯ</p></div>

ಮದುವೆ ವಿಡಿಯೊದಲ್ಲಿನ ದೃಶ್ಯ

   

ಕೋಲ್ಕತ್ತ: ಕಾಲೇಜಿನ ಪ್ರಾಧ್ಯಾಪಕಿಯೊಬ್ಬರು ವಿದ್ಯಾರ್ಥಿಯನ್ನು ಮದುವೆಯಾಗುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿರುವ ಮೌಲಾನಾ ಅಬುಲ್ ಕಲಾಮ್ ಆಜಾದ್‌ ತಾಂತ್ರಿಕ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದಲ್ಲಿ ಈ ಘಟನೆ ನಡೆದಿದೆ. ವಿಡಿಯೊ ಹರಿದಾಡುತ್ತಿದ್ದಂತೆ ತನಿಖೆಗೆ ಆದೇಶಿಸಿರುವುದಾಗಿ ವಿವಿ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ವಧುವಿನಂತೆ ತಯಾರಾಗಿರುವ ಪ್ರಾಧ್ಯಾಪಕಿ ಮತ್ತು ಮನೋವಿಜ್ಞಾನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಹಿಂದೂ–ಬಂಗಾಳಿ ಸಂಪ್ರದಾಯಂತೆ ಮದುವೆ ವಿಧಿಗಳನ್ನು ಮಾಡುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ. ಹಣೆಗೆ ಸಿಂಧೂರ ಇಡುವುದು ಮತ್ತು ಪರಸ್ಪರ ಮಾಲೆಯನ್ನು ಹಾಕುವುದನ್ನು ವಿಡಿಯೊದಲ್ಲಿ ಕಾಣಬಹುದು.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದಂತೆ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ವಿಶ್ವವಿದ್ಯಾಲಯ ಮೂವರು ಸದಸ್ಯರ ತಂಡ ರಚಿಸಿ ತನಿಖೆಗೆ ಆದೇಶಿಸಿದೆ. ಅಲ್ಲದೆ ಸ್ಪಷ್ಟನೆ ನೀಡುವಂತೆ ಪ್ರಾಧ್ಯಾಪಕಿಗೆ ಸೂಚಿಸಿತ್ತು.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಧ್ಯಾಪಕಿ, ‘ಇದೊಂದು ಮನಸ್ಸಿಗೆ ಸಂಬಂಧಿಸಿದ ವಿಷಯ ವಸ್ತು ಹೊಂದಿರುವ ನಾಟಕದ ದೃಶ್ಯವಾಗಿದೆ. ಪಠ್ಯದ ಭಾಗವಾಗಿ ಈ ಸನ್ನಿವೇಶವನ್ನು ಸೃಷ್ಟಿಲಾಗಿತ್ತೇ ಹೊರತು ಯಾವುದೂ ನಿಜವಲ್ಲ. ಆಂತರಿಕ ದಾಖಲೆಗಾಗಿ ವಿಡಿಯೊವನ್ನು ಚಿತ್ರೀಕರಿಸಲಾಗಿತ್ತು, ಆದರೆ ಅದು ಸೋರಿಕೆಯಾಗಿದೆ’ ಎಂದಿದ್ದಾರೆ.

ಘಟನೆಯ ತನಿಖೆ ಮುಗಿಯುವವರೆಗೆ ಪ್ರಾಧ್ಯಾಪಕಿಗೆ ರಜೆಯ ಮೇಲೆ ತೆರಳುವಂತೆ ಹಾಗೂ ವಿದ್ಯಾರ್ಥಿಗೆ ತರಗತಿಗೆ ಹಾಜರಾಗದಂತೆ ವಿವಿ ಅಧಿಕಾರಿಗಳು ಸೂಚಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.