ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಶಿವಸೇನಾ (ಯುಬಿಟಿ) ಮುಖಂಡ ಉದ್ದವ್ ಠಾಕ್ರೆ ಅವರು ಮಹಾಕುಂಭ ಮೇಳದಲ್ಲಿ ಭಾಗವಹಿಸದೇ ಹಿಂದೂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಬುಧವಾರ ಹೇಳಿದ್ದಾರೆ
ಉದ್ದವ್ ಠಾಕ್ರೆ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ಕುಂಭವೇಳದಲ್ಲಿ ಭಾಗವಹಿಸಲಿಲ್ಲ ಎಂದರು. ಗಾಂಧಿ ಮತ್ತು ಠಾಕ್ರೆ ಕುಟುಂಬ ಕುಂಭಮೇಳಕ್ಕೆ ತೆರಳದೇ ಹಿಂದೂ ಸಮುದಾಯಕ್ಕೆ ಅವಮಾನ ಮಾಡಿದೆ. ಹಿಂದೂಗಳು ಅವರನ್ನು ತಿರಸ್ಕರಿಸಬೇಕು ಎಂದು ರಾಮದಾಸ್ ಅಠವಳೆ ಕರೆ ನೀಡಿದ್ದಾರೆ.
ಅವರಿಗೆ ಹಿಂದೂ ಸಮುದಾಯದ ಮತಗಳು ಬೇಕು ಆದರೆ ಅವರ ಧಾರ್ಮಿಕ ಕಾರ್ಯಗಳು ಬೇಡ. ಕಳೆದ ಚುನಾವಣೆಗಳಲ್ಲಿ ಹಿಂದೂ ಮತದಾರರು ಅವರಿಗೆ ಪಾಠ ಕಲಿಸಿದ್ದಾರೆ ಎಂದು ಅಠವಳೆ ತಿಳಿಸಿದರು.
ಮಹಾಶಿವರಾತ್ರಿಯ ಈ ದಿನ (ಫೆ.26) 45 ದಿನಗಳ ಮಹಾಕುಂಭ ಮೇಳ ಮುಕ್ತಾಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.