ADVERTISEMENT

Video| ಬರ್ಲಿನ್‌ನಲ್ಲಿ ಬಾಲಕನ ದೇಶಭಕ್ತಿ ಗೀತೆಗೆ ತಲೆದೂಗಿ ‘ವಾಹ್‌’ ಎಂದ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2022, 16:02 IST
Last Updated 2 ಮೇ 2022, 16:02 IST
   

ಬರ್ಲಿನ್: ಮೂರು ರಾಷ್ಟ್ರಗಳ ಯುರೋಪ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಜರ್ಮನಿಯ ಬರ್ಲಿನ್‌ನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಬಾಲಕನೊಬ್ಬನ ದೇಶಭಕ್ತಿಗೆ ಮೋದಿ ಮನಸೋತರು.

ಬಾಲಕ ಹಾಡುತ್ತಿದ್ದರೆ, ಪ್ರಧಾನಿಗಳು ಚಿಟಿಕೆ ಹೊಡೆಯುತ್ತಾ ತಾಳ ಹಾಕುತ್ತಿದ್ದ ಅಪರೂಪದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ಸ್ವತಃ ಪ್ರಧಾನಿಗಳೂ ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದು, ನನ್ನ ಕಿರಿಯ ಸ್ನೇಹಿತ ಚನ್ನಾಗಿ ಹಾಡುವುದಿಲ್ಲವೇ? ಎಂದು ಬರೆದುಕೊಂಡಿದ್ದಾರೆ.

ಬಾಲಕ ಹಾಡು ಹಾಡುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಆತನ ಭುಜದ ಮೇಲೆ ಒಂದು ಕೈ ಇಟ್ಟು, ಮತ್ತೊಂದು ಕೈನಲ್ಲಿ ಚಿಟಿಕೆ ಹೊಡೆಯುತ್ತಾ, ಆತ್ಮೀಯತೆಯೊಂದಿಗೆ ಆಲಿಸುತ್ತಿರುವುದು 28 ಸೆಕೆಂಡ್‌ಗಳ ವಿಡಿಯೊದಲ್ಲಿದೆ. ಬಾಲಕ ಹಾಡು ಹಾಡುವುದನ್ನು ಮುಗಿಸುತ್ತಲೇ ಆತನ ಕೆನ್ನೆಯನ್ನು ಗಟ್ಟಿಯಾಗಿ ಹಿಡಿದ ಪ್ರಧಾನಿ, ‘ವಾಹ್‌’ ಎಂದು ಪ್ರಶಂಸಿಸುತ್ತಾರೆ. ಈ ವೇಳೆ ಸುತ್ತಲ ಜನ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ವಿಡಿಯೊದಲ್ಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.