ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ ಪ್ರತಿಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಲೋಕಸಭೆಯಲ್ಲಿ ಹರಿದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದರು.
ಬುಧವಾರ ರಾತ್ರಿ ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದಕ್ಷಿಣ ಆಫ್ರಿಕಾದ ಶ್ವೇತವರ್ಣೀಯರ ಕಾನೂನುಗಳ ಬಗ್ಗೆ ಮಹಾತ್ಮಾ ಗಾಂಧಿಯವರು ಏನು ಹೇಳಿದ್ದರು ಎಂಬುದನ್ನು ಇತಿಹಾಸ ಓದಿದರೆ ತಿಳಿಯುತ್ತದೆ ಎಂದು ಹೇಳಿದರು.
'ನನ್ನ ಅಂತರಾತ್ಮ ಈ ಮಸೂದೆಯನ್ನು ಒಪ್ಪುವುದಿಲ್ಲ, ಗಾಂಧೀಜಿ ಅವರಂತೆ ನಾನು ಕೂಡ ಈ ಕಾನೂನನ್ನು ಹರಿದು ಹಾಕುತ್ತಿದ್ದೇನೆ. ಇದು ಅಸಂವಿಧಾನಿಕ, ಬಿಜೆಪಿಯು ದೇವಾಲಯಗಳು ಮತ್ತು ಮಸೀದಿಗಳ ಹೆಸರಿನಲ್ಲಿ ದೇಶ ವಿಭಜನೆ ಮಾಡಲು ಯತ್ನಿಸುತ್ತಿದ್ದು, ನಾನು ಇದನ್ನು ಖಂಡಿಸುತ್ತೇನೆ ಎಂದರೆ. ಪ್ರಮುಖ 10 ತಿದ್ದುಪಡಿಗಳನ್ನು ಒಪ್ಪಿಕೊಳ್ಳಲು ನಿಮ್ಮನ್ನು ವಿನಂತಿಸುತ್ತೇನೆ ಎಂದರು.
ಈ ಮಸೂದೆಯು ಮುಸ್ಲಿಮರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.