ADVERTISEMENT

ಹಿಂದಿ ವಿರುದ್ಧ ಪ್ರತಿಜ್ಞೆ ಮಾಡುವಾಗ ಮಹಿಳೆಯ ಬಳೆ ಕದಿಯಲು ಯತ್ನಿಸಿದ DMK ನಾಯಕ?

ಏಜೆನ್ಸೀಸ್
Published 5 ಮಾರ್ಚ್ 2025, 9:46 IST
Last Updated 5 ಮಾರ್ಚ್ 2025, 9:46 IST
<div class="paragraphs"><p>ಡಿಎಂಕೆ ನಾಯಕರೊಬ್ಬರು ಮಹಿಳೆಯ ಬಳೆ ಕದಿಯಲು ಯತ್ನಿಸಿದ ಸಂದರ್ಭ</p></div>

ಡಿಎಂಕೆ ನಾಯಕರೊಬ್ಬರು ಮಹಿಳೆಯ ಬಳೆ ಕದಿಯಲು ಯತ್ನಿಸಿದ ಸಂದರ್ಭ

   

Credit: X/@annamalai_k

ಚೆನ್ನೈ: ಹಿಂದಿ ವಿರೋಧಿ ಪ್ರತಿಜ್ಞೆ ಮಾಡುವಾಗ ಡಿಎಂಕೆ ನಾಯಕರೊಬ್ಬರು ಮಹಿಳೆಯ ಬಳೆಯನ್ನು ಕದಿಯಲು ಯತ್ನಿಸಿದ್ದಾರೆ ಎನ್ನಲಾದ ವಿಡಿಯೊವನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಕುನ್ನೂರು ಮುನ್ಸಿಪಲ್ ಕೌನ್ಸಿಲ್‌ನ 25ನೇ ವಾರ್ಡ್‌ನ ಡಿಎಂಕೆ ಕೌನ್ಸಿಲರ್ ಜಾಕೀರ್ ಹುಸೇನ್ ಅವರು ಹಿಂದಿ ವಿರೋಧಿ ಪ್ರತಿಜ್ಞೆ ಮಾಡುವಾಗ ಮಹಿಳೆಯೊಬ್ಬರ ಬಳೆಗಳನ್ನು ಕದಿಯುತ್ತಾರೆ. ಕಳ್ಳನನ್ನು ಮತ್ತು ಡಿಎಂಕೆಯನ್ನು ಎಂದಿಗೂ ಬೇರ್ಪಡಿಸಲಾಗುವುದಿಲ್ಲ’ ಎಂದು ಅಣ್ಣಾಮಲೈ ಲೇವಡಿ ಮಾಡಿದ್ದಾರೆ.

ಡಿಎಂಕೆ ನಾಯಕರೊಬ್ಬರು ಮಹಿಳೆಯ ಕೈಯಿಂದ ಬಳೆಯನ್ನು ತೆಗೆಯಲು ಪ್ರಯತ್ನಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

‘ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ’ ಎಂಬುದನ್ನು ಪುನರುಚ್ಚರಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ತಮಿಳು ಭಾಷೆ ಹಾಗೂ ರಾಜ್ಯದ ಸಂಸ್ಕೃತಿಯನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಕೇಂದ್ರ ಸರ್ಕಾರವು ‘ತ್ರಿಭಾಷಾ ಸೂತ್ರ’ದ ಹೆಸರಿನಲ್ಲಿ ಹಿಂದಿ ಭಾಷೆಯನ್ನು ಹೇರಿ, ಆ ಮೂಲಕ ಸಂಸ್ಕೃತ ಭಾಷೆಗೆ ಉತ್ತೇಜನ ನೀಡಲು ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.

‘ಹಿಂದಿ ಹೇರಿಕೆ ವಿರೋಧಿಸುತ್ತೇವೆ. ಹಿಂದಿ ಎಂಬುದು ಮುಖವಾಡ ಆಗಿದ್ದು, ಸಂಸ್ಕೃತ ಭಾಷೆಯೇ ಅದರ ಹಿಂದಿನ ನಿಜವಾದ ಮುಖ’ ಎಂದು ಪಕ್ಷದ ಕಾರ್ಯಕರ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಎನ್‌ಇಪಿ ಭಾಗವಾಗಿ ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಕೇಂದ್ರ ಸರ್ಕಾರವು ಹಿಂದಿ ಹೇರಲು ಮುಂದಾಗಿದೆ ಎಂದು ಆಡಳಿತಾರೂಢ ಡಿಎಂಕೆ ಆರೋಪಿಸುತ್ತಾ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.