ADVERTISEMENT

ವಯನಾಡ್ ಪುನರ್ವಸತಿ: ₹2,221.03 ಕೋಟಿ ಬಿಡುಗಡೆಗೆ ಪ್ರಧಾನಿಗೆ ಕೇರಳ ಸಿಎಂ ಮನವಿ

ಪಿಟಿಐ
Published 10 ಅಕ್ಟೋಬರ್ 2025, 12:46 IST
Last Updated 10 ಅಕ್ಟೋಬರ್ 2025, 12:46 IST
<div class="paragraphs"><p>ಪಿಣರಾಯಿ ವಿಜಯನ್, ನರೇಂದ್ರ ಮೋದಿ</p></div>

ಪಿಣರಾಯಿ ವಿಜಯನ್, ನರೇಂದ್ರ ಮೋದಿ

   

(ಪಿಟಿಐ ಚಿತ್ರ)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು (ಶುಕ್ರವಾರ) ಭೇಟಿ ಮಾಡಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಯನಾಡ್ ಭೂಕುಸಿತದ ಪುನರ್ವಸತಿಗಾಗಿ ₹2,221.03 ಕೋಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ADVERTISEMENT

ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೇಂದ್ರದ ನೆರವಿಗೂ ಮನವಿ ಸಲ್ಲಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪಿಣರಾಯಿ, ಪ್ರಧಾನಿ ಅವರೊಂದಿಗೆ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

ವಯನಾಡ್ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಕಾರ್ಯ ಜೊತೆಗೆ ರಾಜ್ಯದಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆ ಹಾಗೂ ರಾಜ್ಯದ ಸಾಲ ಮಿತಿ ಹೆಚ್ಚಿಸುವ ಕುರಿತು ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್) ₹2,221.03 ಕೋಟಿ ಬಿಡುಗಡೆಗೆ ಪ್ರಧಾನಿಯನ್ನು ಕೇರಳ ಸಿಎಂ ಕೋರಿದ್ದಾರೆ.

ವಯನಾಡ್ ಪುನರ್ವಸತಿ ವಿಷಯದಲ್ಲಿ ಕೇರಳದ ಆಡಳಿತ ಎಡರಂಗ ಹಾಗೂ ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು.

ಕೋಯಿಕ್ಕೋಡ್‌ನಲ್ಲಿ ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡುವಂತೆಯೂ ಪಿಣರಾಯಿ ಮನವಿ ಮಾಡಿದ್ದು, ಇದು ಕೇರಳ ಜನತೆಯ ಬಹುಕಾಲದ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಈ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೂ ಪಿಣರಾಯಿ ವಿಜಯನ್ ಚರ್ಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.