ADVERTISEMENT

ನಾವು ವಿದ್ಯಾರ್ಥಿಗಳಿಗೆ ಪೆನ್ ಕೊಡುತ್ತೇವೆ, ಅವರು ಗನ್ ಕೊಡುತ್ತಾರೆ: ಕೇಜ್ರಿವಾಲ್

ಪಿಟಿಐ
Published 31 ಜನವರಿ 2020, 12:15 IST
Last Updated 31 ಜನವರಿ 2020, 12:15 IST
ಅರವಿಂದಕೇಜ್ರಿವಾಲ್
ಅರವಿಂದಕೇಜ್ರಿವಾಲ್   

ನವದೆಹಲಿ: ನಮ್ಮ ಸರ್ಕಾರ ಮಕ್ಕಳಿಗೆ ಕಂಪ್ಯೂಟರ್ ಮತ್ತು ಪೆನ್‌ ನೀಡುತ್ತಿದೆ. ಆದರೆ ಅವರುಗನ್ ಮತ್ತು ದ್ವೇಷ ಬಿತ್ತುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಐಟಿ-ಟೆಕ್ ಸಮ್ಮೇಳನದಲ್ಲಿ ದೆಹಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ಆತ್ಮವಿಶ್ವಾಸದಿಂದ ಮಾತನಾಡುತ್ತಿರುವ ವಿಡಿಯೊ ಟ್ವೀಟ್ ಮಾಡಿದ ಕೇಜ್ರಿವಾಲ್, ನಾವು ಮಕ್ಕಳ ಕೈಗೆ ಪೆನ್ನು ಮತ್ತು ಕಂಪ್ಯೂಟರ್ ನೀಡುವುದರ ಜತೆಗೆ ಅವರಲ್ಲಿವಾಣಿಜ್ಯೋದ್ಯಮದ ಕನಸು ತುಂಬುತ್ತಿದ್ದೇವೆ. ಆದರೆ ಅವರು ಗನ್ ಮತ್ತು ದ್ವೇಷವನ್ನು ನೀಡುತ್ತಿದ್ದಾರೆ. ನಿಮ್ಮ ಮಕ್ಕಳಿಗೆ ನೀವು ಏನು ನೀಡಲು ಬಯಸುತ್ತೀರಿ?. ಫೆಬ್ರುವರಿ 8ಕ್ಕೆ ನನಗೆ ಹೇಳಿ ಎಂದಿದ್ದಾರೆ.

ಜಾಮಿಯಾ ಬಳಿ ನಡೆದ ಘಟನೆಗೆ ಬಿಜೆಪಿ ಕುಮ್ಮಕ್ಕು ನೀಡಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ADVERTISEMENT

ದೆಹಲಿಯಲ್ಲಿ ಫೆಬ್ರುವರಿ 8ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು ಬಿಜೆಪಿ ಪಕ್ಷ ಹಿಂಸಾಚಾರವನ್ನುಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.