ಲಖನೌ: ‘ನಮ್ಮದನ್ನು ನಾವು ಪಡೆಯಲೇಬೇಕು. ಸತ್ಯ ಎಂಬುದು ಯಾವಾಗಲೂ ಕಹಿಯಾಗಿರುತ್ತದೆ. ಸತ್ಯವನ್ನು ಸ್ವೀಕರಿಸಲು ಧೈರ್ಯ ಇರಬೇಕು’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ‘ಸಂಭಲ್‌ನಲ್ಲಿ 67 ತೀರ್ಥ ಕುಂಡಗಳು, 17 ಬಾವಿಗಳನ್ನು ನಾಶಪಡಿಸಿರುವುದು ಪತ್ತೆಯಾಗಿದೆ. ಇದರಲ್ಲಿ 54 ತೀರ್ಥಕ್ಷೇತ್ರಗಳನ್ನು ಪತ್ತೆಹಚ್ಚಿದ್ದು, ಬಾವಿಗಳನ್ನು ಒತ್ತುವರಿದಾರರಿಂದ ತೆರವುಗೊಳಿಸಲಾಗಿದೆ’ ಎಂದು ತಿಳಿಸಿದರು.
‘ನಮ್ಮದು ಏನಿದೆಯೋ ಅದು ಮಾತ್ರ ನಮಗೆ ಸೇರಿದ್ದು, ಅದಕ್ಕಿಂತ ಹೆಚ್ಚಿನದು ಏನೂ ಬೇಡ’ ಎಂದರು.
ಸಂಭಲ್‌ನ ಜಾಮಿಯಾ ಮಸೀದಿಯ ಮಾಲೀಕತ್ವದ ವಿವಾದ ನ್ಯಾಯಾಲಯದಲ್ಲಿರುವಾಗಲೇ, ಯೋಗಿ ಆದಿತ್ಯನಾಥ ಅವರು ಈ ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.