ADVERTISEMENT

2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಅಸಾಧ್ಯವೆಂದ ಗುಲಾಂ ನಬಿ

ಗುಲಾಂ ನಬಿ ಆಜಾದ್ ಹೇಳಿಕೆ

ಪಿಟಿಐ
Published 2 ಡಿಸೆಂಬರ್ 2021, 12:25 IST
Last Updated 2 ಡಿಸೆಂಬರ್ 2021, 12:25 IST
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್   

ಜಮ್ಮು: ‘2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ಅಸಾಧ್ಯವೆಂದು’ ಆ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಜಮ್ಮುವಿನ ಪೂಂಚ್‌ನಲ್ಲಿ ಬುಧವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿಮಾತನಾಡಿದ್ದಅವರು, ‘ಸಂವಿಧಾನದ 370ನೇ ವಿಧಿ ಮರುಸ್ಥಾಪಿಸುವ ಆಸೆ ನನಗೂ ಇದೆ. ಆದರೆ, ಅದಕ್ಕೆ ನಮ್ಮ ಪಕ್ಷ ಲೋಕಸಭೆಯಲ್ಲಿ 300 ಸ್ಥಾನಗಳ ಮೇಲೆ ಗೆಲ್ಲಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯವಾದ ಮಾತು’ ಎಂದು ಹೇಳಿದ್ದಾರೆ.

‘ಜಮ್ಮು–ಕಾಶ್ಮೀರದ ಪರಿಸ್ಥಿತಿ ನೋಡಿದರೆ ಸಂಸತ್ಚುನಾವಣೆಯಲ್ಲಿ ನಾವು ಗೆಲ್ಲಬೇಕು ಎಂದು ದೇವರಿಗೂ ಎನಿಸುತ್ತದೆ. ಆದರೆ, ನನಗೇನೂ ಹಾಗೇ ತೋರುತ್ತಿಲ್ಲ. ನಾವು 300 ಸ್ಥಾನಗಳನ್ನು ಪಡೆಯುವುದು ಅಸಾಧ್ಯ. ಹೀಗಾಗಿ ನಾನು ಇಲ್ಲಿನ ಜನರಿಗೆ ಹುಸಿ ಭರವಸೆಗಳನ್ನು ನೀಡುವುದಿಲ್ಲ’ ಎಂದಿದ್ದಾರೆ.

ADVERTISEMENT

ಜಮ್ಮು–ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ಕೇಂದ್ರದ ಬಿಜೆಪಿ ಸರ್ಕಾರ 2019 ರಲ್ಲಿ ರದ್ದುಗೊಳಿಸಿತ್ತು. ಜಮ್ಮು–ಕಾಶ್ಮೀರ ದೇಶದ ಇತರ ರಾಜ್ಯಗಳಂತೆ ಅದೂ ಒಂದು ಎಂದು, ಅಲ್ಲಿನ ಲಡಾಕ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು.

ಕಾಂಗ್ರೆಸ್ ಪಕ್ಷ 370 ನೇ ವಿಧಿಯನ್ನು ಮರುಸ್ಥಾಪಿಸುವ ಒತ್ತಾಯದ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ ಎಂದು ಇತ್ತೀಚೆಗೆಗುಲಾಂ ನಬಿ ಆಜಾದ್ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.