ADVERTISEMENT

ಕೋಲ್ಕತ್ತದಲ್ಲಿ ತಯಾರಾಗುತ್ತಿದೆ 100 ಅಡಿಯ ಬುದ್ಧನ ಪ್ರತಿಮೆ

ಪಿಟಿಐ
Published 28 ಜನವರಿ 2021, 11:51 IST
Last Updated 28 ಜನವರಿ 2021, 11:51 IST
ಪ್ರತಿಮೆ ತಯಾರಿಯಲ್ಲಿ ತೊಡಗಿರುವ ಕಾರ್ಮಿಕರು –ಪಿಟಿಐ ಚಿತ್ರ
ಪ್ರತಿಮೆ ತಯಾರಿಯಲ್ಲಿ ತೊಡಗಿರುವ ಕಾರ್ಮಿಕರು –ಪಿಟಿಐ ಚಿತ್ರ   

ಕೋಲ್ಕತ್ತ: ಇಲ್ಲಿನ ಆವೆಮಣ್ಣಿನ ಮಾದರಿಕಾರರೊಬ್ಬರು 100 ಅಡಿಯ ಭಗವಾನ್‌ ಬುದ್ಧನ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದು, ಇದು ದೇಶದಲ್ಲೇ ಅತಿ ದೊಡ್ಡದಾದ ಬುದ್ಧನ ವಿಗ್ರಹ ಎನ್ನಲಾಗಿದೆ.

ಮುಂದಿನ ವರ್ಷ ಬೋಧ್‌ಗಯಾದ ದೇವಸ್ಥಾನವೊಂದರಲ್ಲಿ ಇದು ಪ್ರತಿಷ್ಠಾಪನೆ ಆಗಲಿದೆ. ಬಾರಾನಗರದ ಘೋಷ್‌ಪಾರಾ ಪ್ರದೇಶದಲ್ಲಿರುವ ಮೈದಾನವೊಂದರಲ್ಲಿ ಫೈಬರ್‌ಗ್ಲಾಸ್‌ ಬಳಸಿ ಈ ಪ್ರತಿಮೆಯನ್ನು ತಯಾರಿಸಲಾಗುತ್ತಿದೆ.

ಮುಂಬರುವ ಬುದ್ಧ ಪೂರ್ಣಿಮೆಯ ಮೊದಲು ಈ ಬೃಹತ್‌ ಪ್ರತಿಮೆಯನ್ನು ‘ಬುದ್ಧ ಇಂಟರ್‌ನ್ಯಾಷನಲ್‌ ವೆಲ್‌ಫೇರ್‌ ಮಿಷನ್‌’ ದೇವಸ್ಥಾನದಲ್ಲಿ ಅಳವಡಿಸಲಿದೆ. ಬಿಡಿ ಬಿಡಿಯಾಗಿ ಪ್ರತಿಮೆಯನ್ನು ತಯಾರಿಸಲಾಗುತ್ತಿದ್ದು, ಪೂರ್ಣಗೊಳ್ಳಲು ಇನ್ನೂ ಹಲವು ತಿಂಗಳು ಬೇಕು. ಈ ಭಾಗಗಳನ್ನು ಬೋಧ್‌ಗಯಾಗೆ ತೆಗೆದುಕೊಂಡು ಹೋಗಿ ಅಲ್ಲಿ ಜೋಡಿಸಲಾಗುವುದು ಎಂದು ಕಲಾವಿದರಾದ ಮಿಂತು ಪಾಲ್‌ ಗುರುವಾರ ತಿಳಿಸಿದ್ದಾರೆ.

ADVERTISEMENT

2015ರಲ್ಲಿ ಪಾಲ್‌ 80 ಅಡಿ ಎತ್ತರದ ದುರ್ಗೆಯ ಮೂರ್ತಿಯನ್ನು ತಯಾರಿಸಿದ್ದರು. ಇದು ವಿಶ್ವದಲ್ಲೇ ಅತಿ ಎತ್ತರದ ದುರ್ಗೆಯ ವಿಗ್ರಹ ಎಂದು ಖ್ಯಾತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.