
ಕೋಲ್ಕತ್ತ: ಪಕ್ಷಕ್ಕೆ ಈಚೆಗಷ್ಟೇ ರಾಜೀನಾಮೆ ನೀಡಿದ್ದ ಸಿಪಿಎಂ ಹಿರಿಯ ನಾಯಕ ಪ್ರತೀಕ್ ಉರ್ ರೆಹಮಾನ್ ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಶನಿವಾರ ಸೇರ್ಪಡೆಯಾದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿದ್ದ ಪ್ರತೀಕ್ ಅವರು, ಅಭಿಷೇಕ್ ಸಮ್ಮುಖದಲ್ಲೇ ಟಿಎಂಸಿಗೆ ಸೇರ್ಪಡೆಗೊಂಡರು.
‘ಮಾರ್ಕ್ಸ್‌ವಾದಿ ಪಕ್ಷದೊಳಗೆ ಉಸಿರುಗಟ್ಟುವ ವಾತಾವರಣವಿದೆ’ ಎಂದು ಟಿಎಂಸಿಗೆ ಸೇರ್ಪಡೆಗೊಂಡ ಬಳಿಕ ಬ್ಯಾನರ್ಜಿ ಅವರ ಅಮ್ತಾಲಾ ಕಚೇರಿಯಲ್ಲಿ ಪ್ರತೀಕ್ ಅವರು ಸುದ್ದಿಗಾರರಿಗೆ ತಿಳಿಸಿದರು.
‘ಬಿಜೆಪಿಯ ನಿರಂಕುಶ ಆಡಳಿತದ ವಿರುದ್ಧ ಹೋರಾಟ ನಡೆಸಲು ಬಯಸುತ್ತೇನೆ. ಜನರನ್ನು ವಿಭಜಿಸಲು ಬಯಸುವ ಶಕ್ತಿಗಳ ಸವಾಲು ಎದುರಿಸುವ ಸಾಮರ್ಥ್ಯ ಟಿಎಂಸಿಗೆ ಮಾತ್ರ ಇದೆ ಎಂದು ನಂಬಿದ್ದೇನೆ’ ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯರಾಗಿದ್ದ ರೆಹಮಾನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.