ADVERTISEMENT

ಪಶ್ಚಿಮ ಬಂಗಾಳ, ಉತ್ತರಾಖಂಡ ಉಪಚುನಾವಣೆ: ಟಿಎಂಸಿ 3, ಬಿಜೆಪಿ 1ರಲ್ಲಿ ಗೆಲುವು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 10:29 IST
Last Updated 28 ನವೆಂಬರ್ 2019, 10:29 IST
   

ಕೋಲ್ಕತ್ತ: ಇತ್ತೀಚೆಗೆ ಪಶ್ಚಿಮ ಬಂಗಾಳ ಹಾಗೂ ಉತ್ತರಾಖಂಡ ರಾಜ್ಯದಲ್ಲಿ ನಡೆದ ಉಪಚುನಾವಣೆಫಲಿತಾಂಶ ಪ್ರಕಟವಾಗಿದ್ದು ತೃಣಮೂಲ ಕಾಂಗ್ರೆಸ್‌ 3 ಹಾಗೂ ಬಿಜೆಪಿ 1 ಸ್ಥಾನವನ್ನು ಗೆದ್ದುಕೊಂಡಿದೆ.

ಪಶ್ಚಿಮ ಬಂಗಾಳದ ಕಾಳಿಯಗಂಜ್‌, ಖರಗ್‌ಪುರ್‌, ಕರೀಂಪುರ್‌ ಕ್ಷೇತ್ರಗಳನ್ನು ಟಿಎಂಸಿ ಗೆದ್ದುಕೊಂಡಿದೆ. ಇದೇ ಮೊದಲ ಬಾರಿಗೆ ಟಿಎಂಸಿಕಾಳಿಯಗಂಜ್‌ ಹಾಗೂ ಖರಗ್‌ಪುರ್‌ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಟಿಎಂಸಿಗೆ ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿ ಶೇ 39 ರಷ್ಟು ಮತಗಳನ್ನು ಪಡೆದುಕೊಂಡು ಸೋಲು ಕಂಡಿದೆ.

ಇನ್ನು ಉತ್ತರಾಖಂಡ್ಫಿತೋರ್ಗರ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 3267 ಮತಗಳಿಂದ ಗೆಲುವು ಕಂಡಿದ್ದಾರೆ.

ADVERTISEMENT

ಫಿತೋರ್ಗರ್‌ ಕ್ಷೇತ್ರದ ಅಭ್ಯರ್ಥಿ ಪ್ರಕಾಶ್‌ ಪಂತ್‌ ಅವರ ನಿಧನದಿಂದಾಗಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು.ಪ್ರಕಾಶ್‌ ಪಂತ್‌ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರ ಪತ್ನಿ ಚಂದ್ರಾ ಪಂತ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 3 ಸ್ಥಾನಗಳನ್ನು ಗೆದ್ದು ಬಿಜೆಪಿಗೆ ಶಾಕ್‌ ನೀಡಿದೆ. ಎರಡು ಕ್ಷೇತ್ರಗಳ ಪೈಕಿಬಿಜೆಪಿ ಒಂದು ಸ್ಥಾನದಲ್ಲಿ 2400ಮತಗಳ ಅಂತರದಲ್ಲಿ ಸೋಲು ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.