
ಕೋಲ್ಕತ್ತ: ಚುನಾವಣಾ ಆಯೋಗದ ಎಸ್‌ಐಆರ್ ವೇಳೆ ತನ್ನನ್ನು ಮತದಾರರ ಪಟ್ಟಿಯಿಂದ ತೆಗೆಯುತ್ತಾರೆ ಎಂದು ಹೆದರಿಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಬುಧವಾರ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಜರುಗಿದೆ.
ಮೃತಪಟ್ಟಿರುವ ಸಫಿಕುಲ್ ಗಾಜಿಗೆ ಕೆಲವು ತಿಂಗಳ ಹಿಂದೆ ಅಪಘಾತವಾಗಿತ್ತು. ಅದರಿಂದ ಮಾನಸಿಕವಾಗಿ ಕುಗ್ಗಿದ್ದ. ರಾಜ್ಯದಲ್ಲಿ ಎಸ್‌ಐಆರ್ ಆರಂಭವಾಗಲಿರುವ ವಿಷಯ ತಿಳಿದ ನಂತರ ತುಂಬಾ ಭಯಭೀತನಾಗಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
‘ನನ್ನ ಬಳಿ ಸರಿಯಾದ ದಾಖಲೆಗಳು ಇಲ್ಲ. ಎಸ್‌ಐಆರ್ ನಂತರ ದೇಶದಿಂದ ನನ್ನನ್ನು ಹೊರಹಾಕಲಾಗುತ್ತದೆ ಎಂದು ಗಾಬರಿಗೊಂಡಿದ್ದರು. ಇದೇ ಯೋಚನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಮೆ ಮಾಡಿಕೊಂಡಿದ್ದಾರೆ’ ಎಂದು ಅವರ ಪತ್ನಿ ತಿಳಿಸಿದ್ದಾರೆ.
ಬಿಜೆಪಿಯು ಜನರಲ್ಲಿ ಭಯವನ್ನು ಸೃಷ್ಟಿಸುತ್ತಿದೆ. ರಾಜ್ಯದಲ್ಲಿ‘ಎಸ್‌ಐಆರ್’ಗೆ ಭಯಪಟ್ಟು ಆತ್ಮಹತ್ಮೆ ಮಾಡಿಕೊಂಡಿರುವ ಎಂಟನೇ ಪ್ರಕರಣ ಇದಾಗಿದೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಆರೋಪಿಸಿದೆ.
ಘಟನೆಯು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದ್ದು, ಇದು ರಾಜಕೀಯ ಪ್ರೇರಿತ ನಾಟಕವಾಗಿದೆ ಎಂದು ಬಿಜೆಪಿಯು ತಿರುಗೇಟು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.