ADVERTISEMENT

ಕುಸ್ತಿಪಟುಗಳ ಬಗ್ಗೆ ಮೌನ, ಫ್ಲೈಯಿಂಗ್‌ ಕಿಸ್‌ ಬಗ್ಗೆ ಮಾತಾಡ್ತಿದ್ದಾರೆ: ಮಹುವಾ

ಪಿಟಿಐ
Published 10 ಆಗಸ್ಟ್ 2023, 9:18 IST
Last Updated 10 ಆಗಸ್ಟ್ 2023, 9:18 IST
ಮಹುವಾ ಮೊಯಿತ್ರಾ (ಸಂಗ್ರಹ ಚಿತ್ರ)
ಮಹುವಾ ಮೊಯಿತ್ರಾ (ಸಂಗ್ರಹ ಚಿತ್ರ)   

ನವದೆಹಲಿ: ‘ಫ್ಲೈಯಿಂಗ್‌ ಕಿಸ್‌’ ವಿಚಾರಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಮೌನವಾಗಿದ್ದವರು ಇದೀಗ ಫ್ಲೈಯಿಂಗ್‌ ಕಿಸ್‌ ಕುರಿತು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬುಧವಾರ ರಾಹುಲ್‌ ಗಾಂಧಿ ಅವರು ಸದನದಿಂದ ತೆರಳುತ್ತಿದ್ದ ವೇಳೆ ಬಿಜೆಪಿ ಸಂಸದೆಯರತ್ತ ಫ್ಲೈಯಿಂಗ್‌ ಕಿಸ್‌ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 20 ಸಂಸದೆಯರು ಲೋಕಸಭಾ ಸ್ಪೀಕರ್‌ಗೆ ದೂರು ನೀಡಿದ್ದರು. ‘ಸ್ತ್ರೀ ದ್ವೇಷಿಯಾದವರಷ್ಟೇ ಹೀಗೆ ವರ್ತಿಸಲು ಸಾಧ್ಯ. ಇದು ಅವರ ಕುಟುಂಬದ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದು ಸ್ಮೃತಿ ಇರಾನಿ ರಾಹುಲ್ ವಿರುದ್ಧ ಕಿಡಿಕಾರಿದ್ದರು.

ಈಗ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹುವಾ ಮೊಯಿತ್ರಾ, ಸ್ಮೃತಿ ಇರಾನಿ ನಡೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದಾಗ ಒಂದು ಮಾತನಾಡದ ಸಂಸದೆ ಸ್ಮೃತಿ ಇರಾನಿ ಇದೀಗ ಫ್ಲೈಯಿಂಗ್‌ ಕಿಸ್‌ ಬಗ್ಗೆ ಮಾತನಾಡುತ್ತಿದ್ದಾರೆ. ಆವಾಗ ನಿಮ್ಮ(ಸ್ಮೃತಿ ಇರಾನಿ) ಈ ಕಾಳಜಿ ಎಲ್ಲಿ ಹೋಗಿತ್ತು?’ ಎಂದು ಕೇಳಿದ್ದಾರೆ.

ADVERTISEMENT

ಲೈಂಗಿಕ ದೌರ್ಜನ್ಯದ ಆರೋಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ದೆಹಲಿ ಪೊಲೀಸರು ಜೂನ್‌ 15ರಂದು ಚಾರ್ಚ್‌ ಶೀಟ್‌ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.