ADVERTISEMENT

ಯಾವ ರಾಜ್ಯದಲ್ಲಿ ಎಷ್ಟು ಡೋಸ್‌ ಲಸಿಕೆ ನೀಡಲಾಗಿದೆ? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2021, 16:58 IST
Last Updated 19 ಜೂನ್ 2021, 16:58 IST
ಮಹಾರಾಷ್ಟ್ರದ ನವೀಮುಂಬೈನಲ್ಲಿ ಯುವತಿಯೊಬ್ಬರು ಲಸಿಕೆ ಹಾಕಿಸಿಕೊಂಡ ಕ್ಷಣ (ಪಿಟಿಐ ಚಿತ್ರ)
ಮಹಾರಾಷ್ಟ್ರದ ನವೀಮುಂಬೈನಲ್ಲಿ ಯುವತಿಯೊಬ್ಬರು ಲಸಿಕೆ ಹಾಕಿಸಿಕೊಂಡ ಕ್ಷಣ (ಪಿಟಿಐ ಚಿತ್ರ)   

ನವದೆಹಲಿ: ದೇಶದಲ್ಲಿ ಇದುವರೆಗೆ ನೀಡಲಾಗಿರುವ ಕೋವಿಡ್‌ ಲಸಿಕೆ ಡೋಸ್‌ಗಳ ರಾಜ್ಯವಾರು ಮಾಹಿತಿಯನ್ನು ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಿದೆ.

ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿಹೆಚ್ಚು ಡೋಸ್‌ ಲಸಿಕೆಗಳನ್ನು ನೀಡಲಾಗಿದೆ. ಇಲ್ಲಿ 2.71 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ 2.5 ಕೋಟಿ ಡೋಸ್ ಮತ್ತು ಗುಜರಾತ್‌ನಲ್ಲಿ 2.15 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.

ರಾಜಸ್ಥಾನವು 2.06 ಕೋಟಿ ಡೋಸ್‌ಗಳನ್ನು ನೀಡಿದೆ ಮತ್ತು ಪಶ್ಚಿಮ ಬಂಗಾಳದಲ್ಲಿ 1.86 ಕೋಟಿ ಲಸಿಕೆ ನೀಡಲಾಗಿದೆ.

ಕರ್ನಾಟಕದಲ್ಲಿ 1.80 ಕೋಟಿ ಡೋಸ್‌ ಲಸಿಕೆಗಳನ್ನು ಈ ವರೆಗೆ ನಾಗರಿಕರಿಗೆ ಹಾಕಲಾಗಿದೆ.

ADVERTISEMENT

ಹೆಚ್ಚಿನ ಮಾಹಿತಿಗೆ ಸರ್ಕಾರದ ವೆಬ್‌ಸೈಟ್‌ ನೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.