ADVERTISEMENT

ಸಾರ್ವತ್ರಿಕ ಆರೋಗ್ಯ ರಕ್ಷಣೆಯ ತುರ್ತು ಪ್ರಯತ್ನಕ್ಕೆ ಡಬ್ಲ್ಯುಎಚ್‌ಒ ಕರೆ

ಪಿಟಿಐ
Published 6 ಏಪ್ರಿಲ್ 2023, 19:45 IST
Last Updated 6 ಏಪ್ರಿಲ್ 2023, 19:45 IST
.
.   

ನವದೆಹಲಿ: ವಿಶ್ವ ಆರೋಗ್ಯ ದಿನದ ಮುನ್ನಾದಿನವಾದ ಗರುವಾರದಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಅಂತರವನ್ನು ಕಡಿಮೆ ಮಾಡಲು ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಮೂಲಕ ಎಲ್ಲರಿಗೂ ಆರೋಗ್ಯವನ್ನು ಸಾಧಿಸಲು ಸಂಘಟಿತ ಮತ್ತು ತುರ್ತು ಪ್ರಯತ್ನಗಳಿಗೆ ಕರೆ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್ ಸಿಂಗ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವತ್ರಿಕ ಆರೋಗ್ಯ ರಕ್ಷಣೆ (ಯುಎಚ್‌ಸಿ) ಮೂಲಕ ಎಲ್ಲರಿಗೂ ಆರೋಗ್ಯವನ್ನು ಸಾಧಿಸಲು ಮತ್ತು ಆರ್ಥಿಕ ತೊಂದರೆಯಿಲ್ಲದೆ ಎಲ್ಲರಿಗೂ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಲು ಸಂಪೂರ್ಣ ಬದ್ಧವಾಗಿದೆ ಎಂದರು.

ವಿಶ್ವ ಆರೋಗ್ಯ ದಿನದಂದು, ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕವಾಗಿ ಸಾರ್ವಜನಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವ 75 ವರ್ಷಗಳನ್ನು ಆಚರಿಸುತ್ತಿದೆ.

ADVERTISEMENT

ಯುಎಚ್‌ಸಿ ತನ್ನ ಗುರಿ ಸಾಧಿಸಲು ಉನ್ನತ ಮಟ್ಟದ ನಾಯಕರು ರಾಜಕೀಯ ಮತ್ತು ಆರ್ಥಿಕ ಸಹಕಾರವನ್ನು ನೀಡಬೇಕು. ಯುಎಚ್‌ಸಿಯ ಬಲವನ್ನು ಹೆಚ್ಚಿಸಲು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಎರಡನೇ ಯುಎನ್ ಜನರಲ್ ಅಸೆಂಬ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದರು.

ಪ್ರಾಥಮಿಕ ಆರೋಗ್ಯ ರಕ್ಷಣೆಗಾಗಿ (ಪಿಎಚ್‌ಸಿ) ನೀತಿ ನಿರೂಪಕರು ಮತ್ತು ಕಾರ್ಯಕ್ರಮ ನಿರ್ವಾಹಕರು ಪ್ರದೇಶದ ಕಾರ್ಯತಂತ್ರವನ್ನು ಕಾರ್ಯಗತಗೊಳಿಸುವುದನ್ನು ಮುಂದುವರಿಸಬೇಕು. ಎಲ್ಲ ದೇಶಗಳಲ್ಲೂ ನೀತಿ ನಿರೂಪಕರು ಮತ್ತು ಪಾಲುದಾರರು ಇದನ್ನು ಬೆಂಬಲಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.