ADVERTISEMENT

ನೋಟು ರದ್ದತಿ ವೈಫಲ್ಯಕ್ಕೆ ಕ್ಷಮೆ ಯಾರು ಕೇಳಬೇಕು: ಕಪಿಲ್‌ ಸಿಬಲ್‌ ಪ್ರಶ್ನೆ

ಪಿಟಿಐ
Published 3 ಜನವರಿ 2023, 13:41 IST
Last Updated 3 ಜನವರಿ 2023, 13:41 IST
ರದ್ದತಿಗೊಂಡ ₹500ಯ ನೋಟುಗಳು | ಸಾಂದರ್ಭಿಕ ಚಿತ್ರ
ರದ್ದತಿಗೊಂಡ ₹500ಯ ನೋಟುಗಳು | ಸಾಂದರ್ಭಿಕ ಚಿತ್ರ   

ನವದೆಹಲಿ: ನೋಟು ರದ್ದತಿಯಿಂದ ಕೇಂದ್ರ ಸರ್ಕಾರಕ್ಕೆ ಯಾವುದೇ ಉದ್ದೇಶವನ್ನು ಸಾಧಿಸಲು ಸಾಧ್ಯವಾಗಿಲ್ಲ. ಇದರ ವೈಫಲ್ಯಕ್ಕೆ ಯಾರು ಕ್ಷಮೆ ಕೇಳಬೇಕು? ಎಂದು ರಾಜ್ಯಸಭಾ ಸದಸ್ಯ ಮತ್ತು ಮಾಜಿ ಕಾನೂನು ಸಚಿವ ಕಪಿಲ್‌ ಸಿಬಲ್‌ ಅವರು ಪ್ರಶ್ನಿಸಿದ್ದಾರೆ.

₹500, ₹1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ 2016ರ ನವೆಂಬರ್‌ 8ರ ಅಧಿಸೂಚನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದ ಬೆನ್ನಲ್ಲೇ ಕಪಿಲ್‌ ಸಿಬಲ್‌ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಬಲ್‌ ಅವರು ನೋಟು ರದ್ದತಿಯ ಮೂಲ ಉದ್ದೇಶಗಳನ್ನು ಪಟ್ಟಿ ಮಾಡಿದ್ದಾರೆ ಮತ್ತು ಇವೆಲ್ಲವೂ ವೈಫಲ್ಯಗೊಂಡಿವೆ ಎಂದಿದ್ದಾರೆ.

'ನೋಟು ರದ್ದತಿ. ಇದನ್ನು ಸುಪ್ರೀಂ ಕೋರ್ಟ್‌ನ ಬಹುಮತದ ತೀರ್ಪು ಎತ್ತಿ ಹಿಡಿದಿದೆ. ನೋಟು ರದ್ದತಿಯ ಮೂಲ ಉದ್ದೇಶಗಳು: ಕಪ್ಪುಹಣದ ನಿಗ್ರಹ, ತೆರಿಗೆ ವಂಚಕರ ನಿಗ್ರಹ, ನಕಲಿ ನೋಟುಗಳ ನಿಗ್ರಹ, ಭಯೋತ್ಪಾದನೆ ನಿಗ್ರಹ, ಭ್ರಷ್ಟಾಚಾರ ಸಮಸ್ಯೆಗಳ ನಿರ್ಮೂಲನೆ. ಎಲ್ಲವೂ ವೈಫಲ್ಯಗೊಂಡಿವೆ. ಇದಕ್ಕೆ ಯಾರು ಕ್ಷಮೆ ಕೇಳಬೇಕು?' ಎಂದು ಕಪಿಲ್‌ ಸಿಬಲ್‌ ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

ADVERTISEMENT

ನ್ಯಾಯಮೂರ್ತಿಗಳಾದ ಎಸ್‌.ಅಬ್ದುಲ್‌ ನಜೀರ್‌, ಬಿ.ಆರ್‌.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್‌ ಹಾಗೂ ಬಿ.ವಿ.ನಾಗರತ್ನ ಅವರಿದ್ದ ಸಾಂವಿಧಾನಿಕ ಪೀಠ 4:1 ಬಹುಮತದಲ್ಲಿ ನೋಟು ರದ್ದತಿ ಅಧಿಸೂಚನೆಯ ಸಿಂಧುತ್ವವನ್ನು ಎತ್ತಿ ಹಿಡಿದ ತೀರ್ಪು ನರೇಂದ್ರ ಮೋದಿ ಸರ್ಕಾರಕ್ಕೆ ದೊಡ್ಡ ಗೆಲುವಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.