ADVERTISEMENT

ಸರ್ಕಾರಿ ಕಚೇರಿಯಲ್ಲಿ ಉದ್ಯೋಗಿಗಳು ಹೆಲ್ಮೆಟ್ ಹಾಕಿಕೊಂಡೆ ಕೆಲಸ ಮಾಡ್ಬೇಕು!

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 8:39 IST
Last Updated 5 ನವೆಂಬರ್ 2019, 8:39 IST
   

ಬಾಂದಾ (ಉತ್ತರ ಪ್ರದೇಶ):ಸುರಕ್ಷತೆ ದೃಷ್ಟಿಯಿಂದಾಗಿ ದ್ವಿಚಕ್ರ ವಾಹನ ಚಲಾವಣೆ ವೇಳೆ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿರುವುದೇನೋ ನಿಜ, ಆದರೆ ಸರ್ಕಾರಿ ಕಚೇರಿಯಲ್ಲೂ ಹೆಲ್ಮೆಟ್ ಧರಿಸಿ ಕೆಲಸ ಮಾಡಬೇಕು ಎಂದರೆ ನೀವಿದನ್ನು ನಂಬಲೇಬೇಕು.

ಹೌದು, ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ವಿದ್ಯುತ್ ಇಲಾಖೆಯ ಸಿಬ್ಬಂದಿ ಹೆಲ್ಮೆಟ್ ಹಾಕಿಕೊಂಡೆ ಕೆಲಸ ಮಾಡುತ್ತಾರೆ. ಅವರುಕೆಲಸ ಮಾಡುವ ಕಟ್ಟಡವು ಶಿಥಿಲಗೊಂಡಿರುವ ಕಾರಣದಿಂದಾಗಿ ಎಲ್ಲ ಉದ್ಯೋಗಿಗಳು ಹೆಲ್ಮೆಟ್ ಹಾಕಿಕೊಂಡೇ ಕೆಲಸ ಮಾಡುತ್ತಿದ್ದಾರೆ.

ಸರ್ಕಾರಿ ಕಚೇರಿಯೊಳಗೆ ಸಿಬ್ಬಂದಿ ಹೆಲ್ಮೆಟ್ ಧರಿಸಿರುವ ಫೋಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ADVERTISEMENT

ಸಿಬ್ಬಂದಿಯು ಕೆಲಸ ಮಾಡುತ್ತಿರುವ ಕಟ್ಟಡದ ಛಾವಣಿಯಲ್ಲಿದ್ದ ರಂಧ್ರಗಳನ್ನು ಈಗಾಗಲೇ ಮುಚ್ಚಲಾಗಿದೆ ಮತ್ತು ಕಟ್ಟಡಕ್ಕೆ ಆಧಾರಾವಾಗಿ ಕೊಠಡಿಯ ಮಧ್ಯಭಾಗದಲ್ಲಿ ಕಂಬ ನಿಲ್ಲಿಸಲಾಗಿದೆ. ಹೀಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹೆಲ್ಮೆಟ್ ಹಾಕಿಕೊಂಡೇ ಕೆಲಸ ಮಾಡುತ್ತಿದ್ದೇವೆ. ಈ ಕುರಿತು ಹಲವು ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾರೊಬ್ಬರೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಕಟ್ಟಡವನ್ನು ದುರಸ್ತಿಗೊಳಿಸಲು ಕೆಲವರ ಪ್ರಾಣ ಹೋಗಲಿ ಎಂದು ಅವರು ಕಾಯುತ್ತಿದ್ದಾರೆ ಎಂದು ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮಳೆಗಾಲದ ವೇಳೆಯಲ್ಲಿ ಛಾವಣಿಯು ಸೋರುವುದರಿಂದಾಗಿ ಕೊಡೆಗಳನ್ನು ತರುತ್ತೇವೆ. ಶಿಥಿಲಗೊಂಡ ಕಟ್ಟಡದಲ್ಲಿ ಕಚೇರಿ ಇರುವುದು ಮಾತ್ರವಲ್ಲದೆ ಪೀಠೋಪಕರಣಗಳು ಕೂಡ ದುಸ್ಥಿತಿಯಲ್ಲಿಲ್ಲ. ದಾಖಲೆಗಳನ್ನು ಸುರಕ್ಷಿತವಾಗಿಡಲು ಡ್ರಾವರ್ಸ್ ಮತ್ತು ಬೀರುಗಳಿಲ್ಲ. ದಾಖಲೆಗಳನ್ನು ರೊಟ್ಟಿನ ಪೆಟ್ಟಿಗಳಲ್ಲಿ ಇಟ್ಟಿದ್ದೇವೆ ಎಂದು ಉದ್ಯೋಗಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.