ADVERTISEMENT

2020ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ: ಅಲ್ಕಾ ಲಾಂಬ

​ಪ್ರಜಾವಾಣಿ ವಾರ್ತೆ
Published 26 ಮೇ 2019, 11:32 IST
Last Updated 26 ಮೇ 2019, 11:32 IST
   

ನವದೆಹಲಿ: ಮುಂದಿನ ವರ್ಷ ತಾನು ಪಕ್ಷ ತೊರೆಯುವೆ ಎಂದು ಆಮ್ ಆದ್ಮಿ ಪಕ್ಷ ಶಾಸಕಿ ಅಲ್ಕಾ ಲಾಂಬ ಹೇಳಿದ್ದಾರೆ.

2013ರಲ್ಲಿ ನಿಮ್ಮೊಂದಿಗೆ ನನ್ನ ಪಯಣ ಆರಂಭವಾಗಿತ್ತು, 2020ರಲ್ಲಿ ಅದು ಕೊನೆಗೊಳ್ಳಲಿದೆ. ಪಕ್ಷದಲ್ಲಿ ಕ್ರಾಂತಿಕಾರಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರಿಗೆ ನನ್ನ ಶುಭ ಹಾರೈಕೆಗಳು.ನೀವು ದೆಹಲಿಯಲ್ಲಿ ಗಟ್ಟಿಯಾಗಿ ನಿಲ್ಲುವಂತಾಗಲಿ.ಕಳೆದ 6 ವರ್ಷ ನೆನಪಿನಲ್ಲಿ ಉಳಿಯುವಂತದ್ದು. ನಾನು ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ ಎಂದು ಚಾಂದ್ನಿ ಚೌಕ್ ಶಾಸಕಿ ಅಲ್ಕಾ ಟ್ವೀಟಿಸಿದ್ದಾರೆ.

ದೆಹಲಿಯಲ್ಲಿ ಮುಂದಿನ ಬಾರಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆಯ ಮುನ್ನ ಅಥವಾ ನಂತರ ಪಕ್ಷ ತೊರೆಯಲಿದ್ದಾರೆಯೇ ಎಂಬುದನ್ನು ಅಲ್ಕಾ ಸ್ಪಷ್ಟವಾಗಿ ಹೇಳಲಿಲ್ಲ.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ಎಎಪಿ ಪಕ್ಷ ಹೀನಾಯವಾಗಿ ಸೋಲು ಅನುಭವಿಸಿದ ನಂತರ ಶನಿವಾರ ಅಲ್ಕಾ ಅವರನ್ನು ಪಕ್ಷದ ಅಧಿಕೃತ ವಾಟ್ಸ್ಆ್ಯಪ್ ಗುಂಪಿನಿಂದ ತೆಗೆದುಹಾಕಲಾಗಿತ್ತು.

ಈಶಾನ್ಯ ದೆಹಲಿ ಅಭ್ಯರ್ಥಿಯಾಗಿದ್ದ ದಿಲೀಪ್ ಪಾಂಡೆ ಅವರುವಾಟ್ಸ್ಆ್ಯಪ್ ಗುಂಪಿನಿಂದ ತೆಗೆದ ಹಾಕಿರುವ ಸ್ಕ್ರೀನ್‌ಶಾಟ್ ಟ್ವೀಟ್ ಮಾಡಿದ್ದ ಮಾಡಿದ್ದ ಅಲ್ಕಾ, ಲೋಕಸಭಾ ಚುನಾವಣೆಯಲ್ಲಿ ಪಕ್ಷ ಪರಾಭವಗೊಂಡಿದ್ದಕ್ಕೆ ತನ್ನ ಮೇಲೆ ಯಾಕೆ ಹೊಣೆ ಹೊರಿಸುತ್ತಿದ್ದೀರಾ ಎಂದು ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದ್ದರು.

ಮುಚ್ಚಿದ ಕೋಣೆಯಲ್ಲಿ ಕುಳಿತು ಎಲ್ಲ ನಿರ್ಧಾರ ತೆಗೆದುಕೊಳ್ಳುವವರ ವಿರುದದ ಈ ರೀತಿಯ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಅಲ್ಕಾ ಕೇಜ್ರಿವಾಲ್ ವಿರುದ್ಧ ಗುಡುಗಿದ್ದರು. ನೀವು (ಕೇಜ್ರಿವಾಲ್) ಈಗ ನಿಮ್ಮ ಪಕ್ಷದವರಿಗೆ ಏನು ಹೇಳುತ್ತಿದ್ದೀರೋ ಅದನ್ನೇ ನಾನು ಅವತ್ತಿನಿಂದಿನ ಹೇಳುತ್ತಿದ್ದೇನೆ.ನನ್ನನ್ನು ಕೆಲವೊಮ್ಮೆ ಗುಂಪಿಗೆ ಸೇರಿಸುತ್ತೀರಿ, ಕೆಲವೊಮ್ಮೆ ತೆಗೆಯುತ್ತೀರಿ.ನೀವು ಸಭೆಯಲ್ಲಿ ಆತ್ಮಾವಲೋಕನ ಮಾಡಿ ಮುಂದುವರಿದರೆ ಉತ್ತಮ ಎಂದಿದ್ದಾರೆ ಲಾಂಬ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.