ADVERTISEMENT

ಪ್ರವಾಸದಲ್ಲಿ ಉದ್ದವ್‌, ಕೋಮಾದಲ್ಲಿ ಕಾರ್ಯಕರ್ತರು: ಶಿಂಧೆ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮೇ 2025, 7:46 IST
Last Updated 11 ಮೇ 2025, 7:46 IST
<div class="paragraphs"><p> ಏಕನಾಥ್ ಶಿಂಧೆ</p></div>

ಏಕನಾಥ್ ಶಿಂಧೆ

   

ಪಿಟಿಐ

ಮುಂಬೈ: ದೇಶದಲ್ಲಿ ಪೆಹಲ್ಗಾಮ್‌ ದಾಳಿ, ಆಪರೇಷನ್‌ ಸಿಂಧೂರ ಕಾರ್ಯಾಚರಣೆಗಳು ನಡೆಯುತ್ತಿರುವಾಗ ಉದ್ದವ್‌ ಠಾಕ್ರೆ ತಮ್ಮ ಕುಟುಂಬದ ಜೊತೆ ಯುರೋಪ್‌ ಪ್ರವಾಸ ಮಾಡುತ್ತಿದ್ದರೇ ಇತ್ತ ಕಾರ್ಯಕರ್ತರು ಕೋಮಾದಲ್ಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಟೀಕಿಸಿದ್ದಾರೆ. 

ADVERTISEMENT

ಉದ್ದವ್‌ ಅವರು ಏಪ್ರಿಲ್‌ 19ರಂದು ಪಕ್ಷದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ನಂತರದಲ್ಲಿ ಯುರೋಪ್‌ಗೆ ತೆರಳಿದ್ದರು. ಇದೀಗ ಅವರು ವಾ‍ಪಸಾಗಿದ್ದಾರೆ ಎಂದು ಉದ್ದವ್‌ ಆಪ್ತರು ಹೇಳಿದ್ದಾರೆ.

ಪೆಹಲ್ಗಾಮ್‌ ದಾಳಿ ಕುರಿತು ಚರ್ಚಿಸಲು ಕರೆದಿದ್ದ ಸರ್ವಪಕ್ಷ ಸಭೆಗೂ ಉದ್ದವ್‌ ಗೈರಾಗಿದ್ದರು. 

ಮಹಾರಾಷ್ಟ್ರಕ್ಕೆ ಪೂರ್ಣಕಾಲ ಸೇವೆ ಸಲ್ಲಿಸುವ ನಾಯಕರು ಬೇಕಾಗಿದ್ದಾರೆ, ಪಾರ್ಟ್‌ ಟೈಮ್‌ ಕೆಲಸ ಮಾಡುವ ನಾಯಕರಲ್ಲ ಎಂದು ಶಿಂಧೆ ಉದ್ದವ್‌ ವಿರುದ್ಧ ಹರಿಹಾಯ್ದಿದ್ದಾರೆ. ಇಂತಹ ಸಂಕಷ್ಟ ಸಮಯದಲ್ಲೂ ಅವರು ಪ್ರವಾಸ ಮಾಡಬೇಕೇ? ಎಂದು ಶಿಂಧೆ ಪ್ರಶ್ನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.