ADVERTISEMENT

ಮುಂಬೈ: ಏರ್ ಇಂಡಿಯಾ, ಇಂಡಿಗೊ ವಿಮಾನಗಳ ರೆಕ್ಕೆ ಡಿಕ್ಕಿ

ಪಿಟಿಐ
Published 3 ಫೆಬ್ರುವರಿ 2026, 19:50 IST
Last Updated 3 ಫೆಬ್ರುವರಿ 2026, 19:50 IST
<div class="paragraphs"><p>ಏರ್‌ ಇಂಡಿಯಾ&nbsp;ವಿಮಾನ</p></div>

ಏರ್‌ ಇಂಡಿಯಾ ವಿಮಾನ

   

ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಏರ್ ಇಂಡಿಯಾ ಮತ್ತು ಇಂಡಿಗೊ ವಿಮಾನಗಳ ರೆಕ್ಕೆಗಳು ಪರಸ್ಪರ ತಾಗಿದ್ದು, ಎರಡೂ ವಿಮಾನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಎರಡೂ ವಿಮಾನಗಳಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ವಿಮಾನಗಳಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬ ವಿವರ ತಕ್ಷಣಕ್ಕೆ ಲಭ್ಯವಾಗಿಲ್ಲ. ಸಂಜೆ 7.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ.

ADVERTISEMENT

ಏರ್‌ ಇಂಡಿಯಾ ವಿಮಾನವು ಟೇಕಾಫ್‌ಗಾಗಿ ತನ್ನ ಸರದಿಗೆ ಕಾಯುತ್ತಾ ಟ್ಯಾಕ್ಸಿವೇನಲ್ಲಿ ನಿಂತಿತ್ತು. ಇಂಡಿಗೊ ವಿಮಾನವು ಲ್ಯಾಂಡ್‌ ಆಗಿ ಟ್ಯಾಕ್ಸಿವೇನತ್ತ ಬರುತ್ತಿತ್ತು. ಇವೆರಡೂ ಏರ್‌ಬಸ್‌ 320 ವಿಮಾನಗಳು.  

ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಯ ಕುರಿತು ತನಿಖೆ ನಡೆಸಲಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ವಿಮಾನಗಳ ರೆಕ್ಕೆ ಪರಸ್ಪರ ತಾಗಿರುವುದನ್ನು ಎರಡೂ ವಿಮಾನಯಾನ ಸಂಸ್ಥೆಗಳು ಖಚಿತಪಡಿಸಿವೆ. ‘ಎರಡು ವಿಮಾನಗಳ ರೆಕ್ಕೆಯ ತುದಿಗಳು ಪರಸ್ಪರ ತಾಗಿವೆ. ಇದರ ಪರಿಣಾಮವಾಗಿ ರೆಕ್ಕೆಗಳಿಗೆ ಹಾನಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಹೆಚ್ಚಿನ ತಾಂತ್ರಿಕ ತಪಾಸಣೆಗಾಗಿ ವಿಮಾನದ ಸಂಚಾರ ರದ್ದುಗೊಳಿಸಲಾಯಿತು’ ಎಂದು ಹೇಳಿವೆ.

ಏರ್‌ ಇಂಡಿಯಾ ವಿಮಾನವು ಮುಂಬೈನಿಂದ ಕೊಯಮತ್ತೂರಿಗೆ ಪ್ರಯಾಣ ಬೆಳೆಸಬೇಕಿದ್ದರೆ, ಇಂಡಿಗೊ ವಿಮಾನ ಹೈದರಾಬಾದ್‌ನಿಂದ ಬಂದಿಳಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.