ADVERTISEMENT

ಸಂಸತ್ತಿನ ಜಂಟಿ ಅಧಿವೇಶನ 26ಕ್ಕೆ

ಪಿಟಿಐ
Published 6 ನವೆಂಬರ್ 2019, 20:34 IST
Last Updated 6 ನವೆಂಬರ್ 2019, 20:34 IST
   

ನವದೆಹಲಿ: ದೇಶದ ಸಂವಿಧಾನವನ್ನು ಅಂಗೀಕರಿಸಿ 70 ವರ್ಷವಾದ ಹಿನ್ನಲೆಯಲ್ಲಿ ಇದೇ 26ರಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ನಡೆಯಲಿದೆ.

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಭಯ ಸದನಗಳ ಸದಸ್ಯರ ಜತೆಗೆ, ಮಾಜಿ ರಾಷ್ಟ್ರಪತಿಗಳು ಮತ್ತು ಮಾಜಿ ಪ್ರಧಾನಿಗಳು ಸಹ ಈ ಅಧಿವೇಶನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

1949ರ ನವೆಂಬರ್‌ 29ರಂದು ಸಂವಿಧಾನವನ್ನು ಉಭಯ ಸದನಗಳು ಅಂಗೀಕರಿಸಿದ್ದವು. ಬಳಿಕ, 1950ರ ಜನವರಿ 26ರಂದು ಜಾರಿಗೆ ಬಂದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.