ADVERTISEMENT

ಪ್ರತಿಭಟನೆ ನಿರತ ರೈತರ ಸ್ಥಿತಿ ಕಳವಳಕಾರಿ: ಸಚಿವ ವಿಜ್

ಹರಿಯಾಣದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

ಪಿಟಿಐ
Published 9 ಏಪ್ರಿಲ್ 2021, 10:59 IST
Last Updated 9 ಏಪ್ರಿಲ್ 2021, 10:59 IST
ಅನಿಲ್ ವಿಜ್ (ಸಂಗ್ರಹ ಚಿತ್ರ)
ಅನಿಲ್ ವಿಜ್ (ಸಂಗ್ರಹ ಚಿತ್ರ)   

ಚಂಡೀಗಡ: ಹರಿಯಾಣದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಇನ್ನೊಂದೆಡೆ, ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ಗಡಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ರೈತರ ಸ್ಥಿತಿ ಬಗ್ಗೆ ಕಳವಳಪಡುವಂತಾಗಿದೆ ಎಂದು ಗೃಹ ಸಚಿವ ಅನಿಲ್‌ ವಿಜ್‌ ಶುಕ್ರವಾರ ಹೇಳಿದರು.

ಈ ಬಿಕ್ಕಟ್ಟನ್ನು ಪರಿಹರಿಸುವ ಸಂಬಂಧ ಶೀಘ್ರದಲ್ಲೇ ರೈತರೊಂದಿಗೆ ಮಾತುಕತೆಗೆ ಮುಂದಾಗುವಂತೆ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಒತ್ತಾಯಿಸುವುದಾಗಿ ಹೇಳಿದರು.

ಆರೋಗ್ಯ ಸಚಿವರೂ ಆಗಿರುವ ಅನಿಲ್ ವಿಜ್, 'ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೆ, ರಾಜ್ಯದ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ನೂರಾರು ರೈತರ ಬಗ್ಗೆ ನನಗೆ ಆತಂಕವಾಗುತ್ತಿದೆ. ಅವರನ್ನು ಕೊರೊನಾ ಸೋಂಕಿನಿಂದ ರಕ್ಷಿಸಬೇಕಾಗಿದೆ' ಎಂದು ಹೇಳಿದರು.

ADVERTISEMENT

‘ಯಾವುದೇ ಸಮಸ್ಯೆಯನ್ನೂ ಮಾತುಕತೆ ಮೂಲಕ ಪರಿಹಾರ ಮಾಡಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಪತ್ರದಲ್ಲಿ ಮನವಿ ಮಾಡುತ್ತೇನೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.