ADVERTISEMENT

'ಗಂಡಸರ ಕೇಳಿ ಮತ ನೀಡಿ' ಎಂದ ಕೇಜ್ರಿವಾಲ್‌‌ಗೆ ಸ್ಮೃತಿ ಇರಾನಿ ತರಾಟೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 10:21 IST
Last Updated 8 ಫೆಬ್ರುವರಿ 2020, 10:21 IST
ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅರವಿಂದ ಕೇಜ್ರಿವಾಲ್
ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾನ ನಡೆಯುತ್ತಿರುವ ಮಧ್ಯೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಹೇಳಿಕೆಯೊಂದನ್ನು ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಜ್ರಿವಾಲ್ ಅವರು ಟ್ವೀಟ್ ಮಾಡಿ, ದೆಹಲಿ ಮಹಿಳೆಯರು ಮತದಾನ ಮಾಡುವಾಗ ಯಾರಿಗೆ ಮತ ಹಾಕಬೇಕೆಂದು ನಿಮ್ಮ ಮನೆಯ ಗಂಡಸರ ಜೊತೆ ಚರ್ಚಿಸಿ ಮತದಾನ ಮಾಡಿ ಎಂಬ ಹೇಳಿಕೆ ಪ್ರಕಟಿಸಿದ್ದರು.

ಇದೇ ಹೇಳಿಕೆಯನ್ನು ಪ್ರಸ್ತಾಪಿಸಿದ ಇರಾನಿ, ಕೇಜ್ರಿವಾಲ್ ಅವರು ಲಿಂಗಭೇದಮಾಡುತ್ತಿದ್ದಾರೆ, ಮಹಿಳೆಯರು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸುವ ಸಾಮರ್ಥ್ಯ ಹೊಂದಿದ್ದಾರೆಎಂದಿದ್ದಾರೆ. ಮುಂದುವರಿದಸ್ಮೃತಿ, ಮಹಿಳೆಯರು ಮತದಾನ ಮಾಡುವಾಗ ನಿಮ್ಮ ಮನೆಯ ಗಂಡಸರ ಜೊತೆ ಚರ್ಚಿಸಿ ಎಂದರೆ, ಮಹಿಳೆಯರಿಗೆ ಸ್ವಂತ ಸಾಮರ್ಥ್ಯ ಇಲ್ಲ ಎಂದು ತಿಳಿದಿದ್ದೀರಾ ಎಂದು ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಈ ರೀತಿ ಹೇಳುವ ಮೂಲಕ ತಾರತಮ್ಯಮಾಡುತ್ತಿದ್ದೀರಿ ಎಂದಿದ್ದಾರೆ.

ADVERTISEMENT

ಅಲ್ಲದೆ,#महिलाविरोधीकेजरीवाल ಎಂದು ಟ್ವಿಟರ್‌‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಇರಾನಿ ಟ್ವೀಟ್‌‌ಗೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ಸ್ಮೃತಿ ಇರಾನಿಯವರೆ ದೆಹಲಿ ಮಹಿಳೆಯರುಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಿದ್ದಾರೆ. ಈ ಸಮಯದಲ್ಲಿ ಅವರು ತಮ್ಮ ಕುಟುಂಬ ನಿರ್ವಹಣೆಗಾಗಿಯಾದರೂ ಯಾರಿಗೆ ಮತ ಚಲಾಯಿಸಬೇಕೆಂದು ನಿರ್ಧರಿಸಿದ್ದಾರೆ. ನಾನು ದೆಹಲಿ ಮಹಿಳೆಯರಲ್ಲಿ ವಿಶೇಷ ಮನವಿ ಮಾಡಿದ್ದೇನೆ ಅಷ್ಟೆ. ತಾರತಮ್ಯಮಾಡಿಲ್ಲ ಎಂದಿದ್ದಾರೆ.

ರಾಷ್ಟ್ರರಾಜಧಾನಿ ದೆಹಲಿಯಲ್ಲಿ 1.47 ಕೋಟಿ ಮತದಾರರು ಮತಚಲಾಯಿಸುವ ಹಕ್ಕು ಹೊಂದಿದ್ದಾರೆ. 672 ಅಭ್ಯರ್ಥಿಗಳು ತಮ್ಮ ಸ್ಪರ್ಧಿಸಿದ್ದಾರೆ. ಇವರಲ್ಲಿ 66.8ಲಕ್ಷ ಮಹಿಳಾ ಮತದಾರರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.