ADVERTISEMENT

ಬೆಂಗಳೂರಿನಿಂದ ಡ್ರಗ್ಸ್‌ ಕಳ್ಳಸಾಗಣೆ: ಕೇರಳದಲ್ಲಿ ಮಹಿಳೆ ಬಂಧನ

ಪಿಟಿಐ
Published 22 ಮಾರ್ಚ್ 2025, 13:35 IST
Last Updated 22 ಮಾರ್ಚ್ 2025, 13:35 IST
<div class="paragraphs"><p>ಡ್ರಗ್‌</p></div>

ಡ್ರಗ್‌

   

ಕೊಲ್ಲಂ (ಕೇರಳ): ಬೆಂಗಳೂರಿನಿಂದ ಸಿಂಥೆಟಿಕ್‌ ಡ್ರಗ್‌ ಎಂಡಿಎಂಎ ಕಳ್ಳಸಾಗಣೆ ಮಾಡುತ್ತಿದ್ದ ಅಂಚಲುಮೂಡು ನಿವಾಸಿ ಅನಿಲಾ ರವೀಂದ್ರನ್‌ ಅವರನ್ನು ಇಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ಹಿಂದೆಯೂ ಮಾದಕವಸ್ತು ಕಳ್ಳಸಾಗಣೆಯಲ್ಲಿ ಇವರು ಸಿಕ್ಕಿಬಿದ್ದಿದ್ದರು.

ADVERTISEMENT

ಬೆಂಗಳೂರಿನಿಂದ ಕಾರಿನಲ್ಲಿ ತೆರಳುತ್ತಿದ್ದ ಅನಿಲಾ ಅವರನ್ನು ನೀಂಡಕರ ಸೇತುವೆ ಬಳಿ ಶುಕ್ರವಾರ ಸಂಜೆ ವಶಕ್ಕೆ ಪಡೆಯಲು ಶಕ್ತಿಕುಲಂಗರ ಪೊಲೀಸರು ಹಾಗೂ ಕೊಲ್ಲಂ ನಗರ ಪೊಲೀಸರ ಜಿಲ್ಲಾ ಮಾದಕದ್ರವ್ಯ ವಿರೋಧಿ ವಿಶೇಷ ಕಾರ್ಯಾಚರಣೆ ಪಡೆಯ ಸಿಬ್ಬಂದಿ ಯತ್ನಿಸಿದರು.

ಕಾರನ್ನು ವೇಗವಾಗಿ ಓಡಿಸುವ ಮೂಲಕ ಸ್ಥಳದಿಂದ ತಪ್ಪಿಸಿಕೊಂಡ ಅನಿಲಾರನ್ನು ಬೆನ್ನಟ್ಟಿದ್ದ ಪೊಲೀಸರು, ಕಾರನ್ನು ತಡೆದು ಲಕ್ಷಾಂತರ ರೂಪಾಯಿ ಮೌಲ್ಯದ 90 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ಕಾರನ್ನು ತಪಾಸಣೆ ನಡೆಸಿದಾಗ 50 ಗ್ರಾಂ ಎಂಡಿಎಂಎ ಸಿಕ್ಕಿತು. ಅನಿಲಾರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಖಾಸಗಿ ಭಾಗದಲ್ಲಿ 40 ಗ್ರಾಂ ಎಂಡಿಎಂಎ ಅಡಗಿಸಿಟ್ಟುಕೊಂಡಿದ್ದು ಪತ್ತೆಯಾಯಿತು. ಇದರ ನಿಖರ ಪ್ರಮಾಣವನ್ನು ಇನ್ನೂ ನಿರ್ಧರಿಸಲಾಗಿ‌ಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.