
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಪಿಟಿಐ ಚಿತ್ರ
ನವದೆಹಲಿ: ಅಮೆರಿಕಕ್ಕೆ ಅಕ್ರಮ ಮತ್ತು ಸಾಮೂಹಿಕ ವಲಸೆಗೆ ಅನುಕೂಲ ಮಾಡಿಕೊಡುವವರನ್ನು ಸಹಿಸುವುದಿಲ್ಲ ಎಂದು ಇಲ್ಲಿನ ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.
ವಿದೇಶಿ ಸರ್ಕಾರಿ ಅಧಿಕಾರಿಗಳು ಮತ್ತು ಹಾಗೆ ಮಾಡುವ ಇತರರನ್ನು ಗುರಿಯಾಗಿಸಿಕೊಂಡು ಅಮೆರಿಕ ಹೊಸ ವೀಸಾ ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಹೇಳಿಕೆಯನ್ನು ರಾಯಭಾರ ಕಚೇರಿಯ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಟ್ರಂಪ್ ಆಡಳಿತವು ಇತ್ತೀಚೆಗೆ ನಡೆಸಿದ ವಲಸೆ ದಮನದ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಈ ಪ್ರಕಟಣೆ ಬಂದಿದೆ.
ಅಮೆರಿಕಕ್ಕೆ ಅಕ್ರಮ ಮತ್ತು ಸಾಮೂಹಿಕ ವಲಸೆಗೆ ಅನುಕೂಲ ಮಾಡಿಕೊಡುವವರನ್ನು ನಾವು ಸಹಿಸುವುದಿಲ್ಲ ಎಂದು ಸ್ಪಷ್ಟಪಪಡಿಸಿದೆ.
ಅಕ್ರಮ ವಲಸೆಗೆ ಸಹಕಾರ ನೀಡುವ ವಿದೇಶಿ ಸರ್ಕಾರಿ ಅಧಿಕಾರಿಗಳು ಮತ್ತು ಹಾಗೆ ಮಾಡುವ ಇತರರನ್ನು ಗುರಿಯಾಗಿಸಿಕೊಂಡು ಅಮೆರಿಕ ಹೊಸ ವೀಸಾ ನಿರ್ಬಂಧಗಳನ್ನು ಅಮೆರಿಕ ಸ್ಥಾಪಿಸಿದೆ. ಟ್ರಂಪ್ ಆಡಳಿತವು ಅಕ್ರಮ ವಲಸೆ ಮತ್ತು ವಿದೇಶಿಯರ ಕಳ್ಳಸಾಗಣೆಯನ್ನು ಸುಗಮಗೊಳಿಸುವ ಕ್ರಿಮಿನಲ್ ಕಾರ್ಟೆಲ್‌ಗಳನ್ನು ವಿದೇಶಿ ಭಯೋತ್ಪಾದಕ ಸಂಘಟನೆಗಳು ಎಂದು ಹೆಸರಿಸಿದೆ ಎಂದು ಅದು ಹೇಳಿದೆ.
ಅಲ್ಲದೆ, ಅಮೆರಿಕದಿಂದ ತಮ್ಮ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಒಪ್ಪದ ಸರ್ಕಾರಗಳು ಗಂಭೀರ ಪರಿಣಾಮಗಳನ್ನು ಎದುರಿಸುತ್ತವೆ ಎಂದೂ ತಿಳಿಸಿದೆ.
ಜೂನ್ 10ರಂದು ಅಮೆರಿಕ ರಾಯಭಾರ ಕಚೇರಿಯು ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅಮೆರಿಕವು ದೇಶಕ್ಕೆ ಕಾನೂನುಬದ್ಧ ಪ್ರಯಾಣಿಕರನ್ನು ಸ್ವಾಗತಿಸುತ್ತಲೇ ಇದೆ. ಆದರೆ, ಅಕ್ರಮ ಪ್ರವೇಶ ಮತ್ತು ವೀಸಾಗಳ ದುರುಪಯೋಗ ಅಥವಾ ಅಮೆರಿಕ ಕಾನೂನಿನ ಉಲ್ಲಂಘನೆಯನ್ನು ಸಹಿಸಲು ಸಾಧ್ಯವಿಲ್ಲ ಮತ್ತು ಸಹಿಸುವುದಿಲ್ಲ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.