ADVERTISEMENT

ವಿಶ್ವ ಯೋಗ ದಿನ: ಕೋವಿಡ್‌ ಸಂದರ್ಭದಲ್ಲಿ ಯೋಗ ತುಂಬಾ ಸಹಕಾರಿ- ರಾಷ್ಟ್ರಪತಿ

ಪಿಟಿಐ
Published 21 ಜೂನ್ 2021, 5:55 IST
Last Updated 21 ಜೂನ್ 2021, 5:55 IST
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನವದೆಹಲಿಯ ರಾಷ್ಟ್ರಪತಿ ಭವನದ ಎದುರು ಯೋಗ ಮಾಡಿದರು  –ಚಿತ್ರ: ರಾಷ್ಟ್ರಪತಿ ಭವನದ ಟ್ವಿಟರ್ ಖಾತೆಯಿಂದ
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನವದೆಹಲಿಯ ರಾಷ್ಟ್ರಪತಿ ಭವನದ ಎದುರು ಯೋಗ ಮಾಡಿದರು  –ಚಿತ್ರ: ರಾಷ್ಟ್ರಪತಿ ಭವನದ ಟ್ವಿಟರ್ ಖಾತೆಯಿಂದ   

ನವದೆಹಲಿ: ವಿಶ್ವ ಯೋಗ ದಿನದ ಅಂಗವಾಗಿ ಸೋಮವಾರ ದೇಶದ ಜನತೆಗೆ ಶುಭಾಶಯ ಕೋರಿರುವರಾಷ್ಟ್ರಪತಿ ರಾಮನಾಥ್ ಕೋವಿಂದ್, ‘ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಯೋಗಾಭ್ಯಾಸ ತುಂಬಾ ಸಹಕಾರಿ‘ ಎಂದು ಹೇಳಿದ್ದಾರೆ.

‘ಜಗತ್ತಿಗೆ ಭಾರತ ನೀಡಿದ ಬಹುದೊಡ್ಡ ಕೊಡುಗೆಗಳಲ್ಲಿ ಯೋಗವೂ ಒಂದಾಗಿದೆ‘ ಎಂದು ಅವರು ಹೇಳಿದ್ದಾರೆ.

#ಇಂಟರ್ನ್ಯಾಷನಲ್ ಡೇ ಆಫ್‌ ಯೋಗಾ ವಿಷಸ್‌, ಎಂಬ ಟ್ಯಾಗ್‌ಲೈನ್‌ಲ್ಲಿ ರಾಷ್ಟ್ರಪತಿ ಅವರು ಯೋಗ ಪ್ರದರ್ಶನ ಮಾಡುತ್ತಿರುವ ಚಿತ್ರದೊಂದಿಗೆ ರಾಷ್ಟ್ರಪತಿ ಭವನ ಯೋಗ ದಿನದ ಶುಭಾಶಯವನ್ನು ಟ್ವೀಟ್‌ ಮಾಡಿದೆ.

ADVERTISEMENT

‘ಸಮಗ್ರ ಆರೋಗ್ಯ ಮತ್ತು ಸಂತೋಷವನ್ನು ಸಾಧಿಸಲು ಮನಸ್ಸು-ದೇಹವನ್ನು ಒಟ್ಟುಗೂಡಿಸುವ ಈ ಯೋಗಾಭ್ಯಾಸ, ಸಹಸ್ರಾರು ವರ್ಷಗಳಿಂದ ಲಕ್ಷಾಂತರ ಜನರಿಗೆ ಪ್ರಯೋಜನ ನೀಡಿದೆ. ವಿಶ್ವಕ್ಕೆ ಭಾರತ ನೀಡಿರುವ ಅತ್ಯುತ್ತಮ ಉಡುಗೊರೆಗಳಲ್ಲಿ ಯೋಗವೂ ಇದು. ಇದು ಕೋವಿಡ್ -19 ಸಾಂಕ್ರಾಮಿಕದ ಕಾಲದಲ್ಲಿ ವಿಶೇಷವಾಗಿ ನೆರವಾಗುತ್ತದೆ‘ ಎಂದು ರಾಷ್ಟ್ರಪತಿ ಭವನ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.