ADVERTISEMENT

ಯುವಕರನ್ನು ಆದಾಯ ಹೆಚ್ಚಿಸುವ ಕಸರತ್ತಿಗೆ ಬಳಸಿದ ಕೇಂದ್ರ: ಜೈರಾಮ್‌ ರಮೇಶ್‌

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

ಪಿಟಿಐ
Published 4 ಆಗಸ್ಟ್ 2024, 16:16 IST
Last Updated 4 ಆಗಸ್ಟ್ 2024, 16:16 IST
ಜೈರಾಂ ರಮೇಶ್‌
ಜೈರಾಂ ರಮೇಶ್‌   

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಕಳೆದ ಆರು ವರ್ಷದಲ್ಲಿ ₹448 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಕಾಂಗ್ರೆಸ್‌ ಭಾನುವಾರ ತಿಳಿಸಿದೆ. ಆ ಮೂಲಕ ದೇಶದ ಭವಿಷ್ಯ ರೂಪಿಸುವ ಲಕ್ಷಾಂತರ ಯುವಕರನ್ನು ನರೇಂದ್ರ ಮೋದಿ ಸರ್ಕಾರವು ಆದಾಯ ಹೆಚ್ಚಿಸುವ ಕಸರತ್ತಿಗೆ ಬಳಸಿಕೊಂಡಿದೆ ಎಂದು ಕಿಡಿಕಾರಿದೆ. 

ಎನ್‌ಟಿಎ ಕುರಿತು ಜುಲೈ 31 ರಂದು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಸುಕಾಂತಾ ಮಜುಮುದಾರ್‌ ನೀಡಿದ ಉತ್ತರದ ಪ್ರತಿಯನ್ನು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ. 

‘ಎನ್‌ಟಿಎ, ನೀಟ್‌ ಹಗರಣದ ಹೃದಯವಾಗಿದೆ. ಇದು ಶಿಕ್ಷಣ ಸಚಿವಾಲಯದ ದೇಹವಾಗಿದ್ದು, ತನ್ನ ಕೆಲಸವನ್ನು ಖಾಸಗಿ ವ್ಯಕ್ತಿಗಳಿಗೆ ಹೊರಗುತ್ತಿಗೆ ನೀಡುವ ಏಕೈಕ ಉದ್ದೇಶವಾಗಿದೆ‘ ಎಂದು ಕಿಡಿಕಾರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.