ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ ಸುಪರ್ದಿಯ ಗೋಶಾಲೆಗೆ ಭೇಟಿ ನೀಡಲು ಅನುಮತಿ ನಿರಾಕರಿಸಿದ್ದನ್ನು ಖಂಡಿಸಿ ವೈಎಸ್‌ಆರ್‌ಸಿಪಿ ನಾಯಕರು ಇಲ್ಲಿ ಪ್ರತಿಭಟಿಸಿದರು.
ಗೋಶಾಲೆಯಲ್ಲಿ ನಿರ್ಲಕ್ಷ್ಯದಿಂದಾಗಿ ಗೋವುಗಳು ಸಾಯುತ್ತಿವೆ ಎಂದು ಆರೋಪಿಸಿದರು. ಟಿಟಿಡಿ ಮಾಜಿ ಅಧ್ಯಕ್ಷರು ಆದ ಭೂಮನ ಕರುಣಾಕರ ರೆಡ್ಡಿ ರಸ್ತೆಯಲ್ಲೇ ಧರಣಿ ನಡೆಸಿದರು. ಇವರಿಗೆ ತಿರುಪತಿ ಕ್ಷೇತ್ರದ ಸಂಸದ ಎಂ.ಗುರುಮೂರ್ತಿ ಮತ್ತು ಇತರರು ಬೆಂಬಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.